ಅರ್ಹತೆ ಇಲ್ಲದವರು ಬೋಗಸ್ ಪಡಿತರ ಚೀಟಿ ಪಡೆದುಕೊಂಡರೆ ಅಂಥವರಿಗೆ ಜೈಲು ಶಿಕ್ಷೆ: ಖಾದರ್

3:39 PM, Tuesday, October 18th, 2016
Share
1 Star2 Stars3 Stars4 Stars5 Stars
(No Ratings Yet)
Loading...

Khadarಮಂಗಳೂರು: ಅರ್ಹತೆ ಇಲ್ಲದವರು ಬೋಗಸ್ ಪಡಿತರ ಚೀಟಿ ಪಡೆದುಕೊಂಡರೆ ಅಂಥವರಿಗೆ ಜೈಲು ಶಿಕ್ಷೆ ನೀಡಲಾಗುವ ಬಗ್ಗೆ ಚಿಂತನೆ ನಡೆದಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದರು.

ಮಂಗಳೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಂಗಳೂರು ಗ್ರಾಮಾಂತರ ಕ್ಷೇತ್ರದ ಜನಪ್ರತಿನಿಧಿಗಳ, ನ್ಯಾಯಬೆಲೆ ಅಂಗಡಿ ಮಾಲೀಕರ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಅನರ್ಹ ವ್ಯಕ್ತಿಗಳು ಕೂಡ ಪಡಿತರ ಚೀಟಿ ಪಡೆದು ಸರ್ಕಾರವನ್ನು ವಂಚಿಸುತ್ತಿದ್ದಾರೆ. ಇನ್ನು ಇದನ್ನು ತಡೆಗಟ್ಟಲು ಅಂತವರಿಗೆ ಜೈಲು ಶಿಕ್ಷೆಯನ್ನು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇನ್ನು ನ್ಯಾಯ ಬೆಲೆ ಅಂಗಡಿ ಮಾಲೀಕರು ನ್ಯಾಯಯುತವಾಗಿ ಸಮರ್ಪಕ ಸೇವೆ ನೀಡಲು ವಿಫಲರಾದರೆ ಎಲ್ಲ ನ್ಯಾಯಬೆಲೆ ಅಂಗಡಿಗಳನ್ನು ಸರಕಾರವೇ ವಹಿಸಿಕೊಳ್ಳುವ ಕುರಿತು ಚಿಂತನೆ ನಡೆಸಲಾಗುವುದು, ನ್ಯಾಯಬೆಲೆ ಅಂಗಡಿಯಲ್ಲಿ ಲಾಭ ಸಿಗಬೇಕೆನ್ನುವ ದೃಷ್ಟಿಯಿಂದ ವ್ಯವಹಾರ ನಡೆಸುವವರು ದಯವಿಟ್ಟು ಅಂಗಡಿಗಳನ್ನು ಬಿಟ್ಟು ಬಿಡಿ. ಎರಡು ತಿಂಗಳ ಮುಂಚೆ ಆಹಾರ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದರೆ ಬದಲಿ ವ್ಯವಸ್ಥೆ ಮಾಡಲಾಗುವುದು ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English