ಕಾಂಗ್ರೆಸ್‌ ಪಕ್ಷದ ನಡಿಗೆ ಗ್ರಾಮ ಸ್ವರಾಜ್‌ ಕಡೆಗೆ – ಉಪನ್ಯಾಸ ಸಂವಾದ

10:48 AM, Wednesday, October 19th, 2016
Share
1 Star2 Stars3 Stars4 Stars5 Stars
(No Ratings Yet)
Loading...

Belthangadiಬೆಳ್ತಂಗಡಿ: ದೇಶದ ಸ್ವಾತಂತ್ರಕ್ಕಾಗಿ 10 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದ್ದ ನೆಹರೂ ಅವರ ಕುರಿತು ಅಪಪ್ರಚಾರ ನಡೆಸುವ ಸಂಘ ಪರಿವಾರದವರು ನಿಜವಾದ ದೇಶಭಕ್ತರಲ್ಲ. ಅಂತಹವರು ದೇಶದ್ರೋಹಿಗಳು ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು ಮಂಗಳವಾರ ಇಲ್ಲಿನ ಸಿವಿಸಿ ಹಾಲ್‌ನಲ್ಲಿ ಕಾಂಗ್ರೆಸ್‌ ಪಕ್ಷದ ನಡಿಗೆ ಗ್ರಾಮ ಸ್ವರಾಜ್‌ ಕಡೆಗೆ – ಉಪನ್ಯಾಸ ಸಂವಾದ ಎಂಬ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಭಾರತ ಇತರ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಸೇರಲು ನೆಹರೂ ಕಾರಣ. ದೇಶದ ಪಂಚಾಂಗವನ್ನು ಗಟ್ಟಿಗೊಳಿಸುವ ಕೆಲಸವನ್ನು ಕಾಂಗ್ರೆಸ್‌ ಪಕ್ಷ ಮಾಡಿದೆ. ಈಗಿನ ಕರ್ನಾಟಕ ಸರಕಾರದ ವಿರುದ್ಧವೂ ವಿಪಕ್ಷಗಳು ಅಪಧಿಪ್ರಚಾರ, ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ರಾಜ್ಯ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸುವ ಕೆಲಸ ಕಾರ್ಯಕರ್ತರಿಂದ ನಡೆಯಬೇಕು ಎಂದರು.

ಉದ್ಘಾಟಿಸಿದ ಶಾಸಕ ಕೆ. ವಸಂತ ಬಂಗೇರ, ರಾಜ್ಯ ಸರಕಾರದ ಕ್ಷೀರಭಾಗ್ಯ, ಶೂ ಭಾಗ್ಯ, ಬಿಸಿಯೂಟ, ಸೈಕಲ್‌, ಯೂನಿಫಾರಂ, ವಸತಿ ಶಾಲೆಗಳು, ಬಸ್‌ ಪಾಸ್‌, ಹಾಸ್ಟೆಲ್‌, ವಿದ್ಯಾರ್ಥಿವೇತನ ಹೀಗೆ ಶಿಕ್ಷಣಕ್ಕೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಬಡವರಿಗೆ ಉಚಿತ ಅಕ್ಕಿ ನೀಡಿದರೆ ಪಡೆದವರೂ ಹೇಳುವುದಿಲ್ಲ, ಕಾರ್ಯಕರ್ತರೂ ಹೇಳುವುದಿಲ್ಲ ಎಂಬಂತಾಗಿದೆ ಎಂದರು.

ವೇದಿಕೆಯಲ್ಲಿ ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ, ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಕೆಪಿಸಿಸಿ ಸದಸ್ಯ ಶ್ರೀನಿವಾಸ ಕಿಣಿ, ಜಿ.ಪಂ. ಸದಸ್ಯರಾದ ಸಾಹುಲ್‌ ಹಮೀದ್‌, ಧರಣೇಂದ್ರ ಕುಮಾರ್‌ ಪಿ., ಶೇಖರ್‌ ಕುಕ್ಕೇಡಿ, ನಮಿತಾ, ಪಕ್ಷದ ವೀಕ್ಷಕ ಸರ್ವೋತ್ತಮ ಗೌಡ ನೆಲ್ಯಾಡಿ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಪುತ್ತೂರು ಕಾಂಗ್ರೆಸ್‌ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಪದ್ಮನಾಭ ನರಿಂಗಾನ, ಬೆಳ್ತಂಗಡಿ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಮಚಂದ್ರ ಗೌಡ, ಕಿಸಾನ್‌ ಘಟಕ ಅಧ್ಯಕ್ಷ ಮಂಜುನಾಥ ಕಾಮತ್‌ ಉಪಸ್ಥಿತರಿದ್ದರು.

ಕೇಶವ ಗೌಡ ಬೆಳಾಲು ನಿರ್ವಹಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಸ್ವಾಗತಿಸಿದರು. ವಿವಿಧ ಮುಂಖಡರಿಂದ ಉಪನ್ಯಾಸ ನಡೆಯಿತು.

ನಾನು ಬಿಜೆಪಿ ಸೇರುತ್ತೇನೆ ಎಂಬ ವದಂತಿ ಹಬ್ಬಿದ್ದು ಇದು ಸಂಪೂರ್ಣ ಸುಳ್ಳು. ಬಿಜೆಪಿ, ಆರ್‌ಎಸ್‌ಎಸ್‌ಗಳನ್ನು ನಾನು ಹತ್ತಿರದಿಂದ ನೋಡಿದವ; ಅಲ್ಲಿ ಯಾರೂ ಯಾರನ್ನೂ ಪ್ರಶ್ನಿಸುವಂತಿಲ್ಲ. ಅಪಾರ ಗುರುದಕ್ಷಿಣೆ ಬಂದ ಹಣ ಏನಾಗುತ್ತದೆ ಎಂದು ಪ್ರಶ್ನಿಸಿದ್ದಕ್ಕೆ ನನಗೆ ಗೇಟ್‌ಪಾಸ್‌ ನೀಡಲಾಯಿತು. ನಾನು ಕಾಂಗ್ರೆಸಿಗಧಿನಾಗಿಯೇ ಸಾಯುವುದು. ಬಿಜೆಪಿಗೆ ಹೋಗುವುದೂ ಒಂದೇ, ನರಕದ ಗುಂಡಿಗೆ ಬೀಳುವುದೂ ಒಂದೇ. ಬಿಜೆಪಿಗೆ ಸೇರುವುದು ಮತ್ತು ಗೆರಟೆಯಲ್ಲಿ ನೀರು ಹಾಕಿ ಮೂಗು ಮುಳುಗಿಸಿ ಜೀವ ಕಳೆದುಕೊಳ್ಳುವುದು ಸಮಾನ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English