ರಾಜ್ಯದಲ್ಲಿ ಶಾಂತಿ ಸಾಮರಸ್ಯ ಸಾಧಿಸಲು ನಾವೆಲ್ಲರೂ ಹೋರಾಡಬೇಕು: ಪ್ರಮೋದ್ ಮುತಾಲಿಕ್

3:49 PM, Wednesday, October 19th, 2016
Share
1 Star2 Stars3 Stars4 Stars5 Stars
(No Ratings Yet)
Loading...

Muthalikಮಂಗಳೂರು: ದಲಿತರ ಮತ್ತು ದಮನಿತರ ಹಕ್ಕುಗಳಿಗಾಗಿ ನಡೆದ ‘ಉಡುಪಿ ಚಲೋ’ ಚಳವಳಿ ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆಯಡಿ ನಡೆಯಿತು. ಆದರೆ ಕೆಲ ವಿಕೃತವಾದಿಗಳು ಮತ್ತು ಬುದ್ಧಿಗೇಡಿಗಳು ಉಡುಪಿ ಚಲೋ ಚಳವಳಿ ನೆಪದಲ್ಲಿ ಕರ್ನಾಟಕದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಿಸಿದರು.

ಪಬ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಲು ಬಂದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್, ಕನಕ ನಡೆಗೆ ತಮ್ಮ ಬೆಂಬಲವಿದೆ ಹಾಗೂ ರಾಜ್ಯದಲ್ಲಿ ಶಾಂತಿ ಸಾಮರಸ್ಯ ಸಾಧಿಸಲು ನಾವೆಲ್ಲರೂ ಹೋರಾಡಬೇಕು ಎಂದು ಹೇಳಿದರು.

ಸೆಕ್ಯುಲರ್‌ವಾದಿಗಳು ಮುಸ್ಲಿಮರು, ಕ್ರಿಶ್ಚಿಯನ್ನರ ಏಜೆಂಟ್‌ಗಳಾಗಿದ್ದಾರೆ. ಅವರಿಗೆ ತಾಕತ್ತಿದ್ದರೆ ಮಸೀದಿಯೊಳಗಿನ ಅಸ್ಪೃಶ್ಯತೆಯನ್ನು ನಿವಾರಿಸಲು ಮಸೀದಿಯೊಳಗಡೆ ಪ್ರವೇಶಿಸಲಿ. ಉಡುಪಿ ಕೃಷ್ಣಮಠವನ್ನು ಪ್ರವೇಶಿಸಿದರೆ ಅವರು ಜೈಲಿಗೆ ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ನವೆಂಬರ್ 10ರಂದು ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿಯನ್ನು ಕೂಡಲೇ ಕೈಬಿಡಬೇಕು. ಕಳೆದ ವರ್ಷ ಟಿಪ್ಪು ಜಯಂತಿ ಸಂದರ್ಭದಲ್ಲಿ ಅನೇಕ ಗೊಂದಲ ಸೃಷ್ಟಿಯಾಗಿತ್ತು. ಅಲ್ಲದೆ ಒಂದು ಪ್ರಾಣವು ಬಲಿಯಾಗಿದೆ. ಆದ್ದರಿಂದ ಟಿಪ್ಪು ಜಯಂತಿಯನ್ನು ಆಚರಿಸಲು ಬಿಟ್ಟರೆ ಮುಂದಿನ ದಿನಗಳಲ್ಲಿ ಬಿನ್ ಲಾಡೆನ್ ನ ಜಯಂತಿಯನ್ನೂ ಆಚರಿಸಬಹುದು ಎಂದು ಟೀಕಿಸಿದರು.

ಪಾಕಿಸ್ತಾನಿ ನಟರು, ಕ್ರಿಕೆಟ್ ಆಟಗಾರರಿಗೆ ಬಹಿಷ್ಕಾರ ಹಾಕಬೇಕು. ದೇಶದಲ್ಲಿ ಅವರ ಸಿನಿಮಾಗಳನ್ನು ಬಹಿಷ್ಕರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಾರೆ, ಪಾಕಿಸ್ತಾನಕ್ಕೆ ಬುದ್ಧಿ ಕಲಿಸುತ್ತಾರೆ ಮತ್ತು ಗೋಹತ್ಯೆ ನಿಷೇಧಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಈ ದೇಶದಲ್ಲಿ ಇರಬೇಕಾದರೆ ಎಲ್ಲರಿಗೂ ಒಂದೇ ಕಾನೂನು ಹಾಗೂ ಎಲ್ಲರೂ ಅದಕ್ಕೆ ಬದ್ಧರಾಗಿರಬೇಕು ಎಂದು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English