ತ್ರಿವಳಿ ತಲಾಖ್‍ಗೆ ಸಂಬಂಧಿಸಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಾದರೂ ಏಕೆ?: ಇಬ್ರಾಹಿಂ ಕೋಡಿಜಾಲ್

12:39 PM, Friday, October 21st, 2016
Share
1 Star2 Stars3 Stars4 Stars5 Stars
(No Ratings Yet)
Loading...

Ibrahim Kodijalಮಂಗಳೂರು: ತ್ರಿವಳಿ ತಲಾಖ್‍ಗೆ ಸಂಬಂಧಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌‌ ಸಲ್ಲಿಸಿರುವುದನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಆಕ್ಷೇಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಸ್ವಾತಂತ್ರವನ್ನು ಸಂವಿಧಾನವೇ ನೀಡಿರುವಾಗ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಾದರೂ ಏಕೆ? ಮಹದಾಯಿ, ಕಾವೇರಿಯಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತವಾಗಿ ದೇಶದಲ್ಲಿ ಪ್ರತಿ ದಿನ ತೈಲ ಬೆಲೆ ಏರಿಕೆಯಾಗುತ್ತಿದೆ. ರೈತರು, ಬಡವರು ಕಂಗಾಲಾಗಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದರು.

Ibrahim Kodijalಸಮಾನ ನಾಗರಿಕ ಸಂಹಿತೆಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ ಎಂದ ಅವರು, ದೇಶಕ್ಕೆ ದೊರಕಿರುವ ಸ್ವಾತಂತ್ರ್ಯವನ್ನು ಉಳಿಸಬೇಕಾದರೆ ಎಲ್ಲಾ ಧರ್ಮ, ವರ್ಗದ ಜನರು ಒಂದಾಗಿ ಬಾಳಲು ಅವಕಾಶ ಒದಗಿಸಬೇಕು. ಸ್ಚಚ್ಛ ಭಾರತ್ ಮಾಡುವ ಮೊದಲು ಪ್ರಧಾನಿ ತಮ್ಮ ಹೃದಯವನ್ನು ಸ್ವಚ್ಛಗೊಳಿಸಲಿ ಎಂದು ಹೇಳಿದರು.

Ibrahim Kodijal

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English