ಮಂಗಳೂರು : ಬಹುತೇಕ ಮುಸ್ಲಿಂರು ಮೂಲತ: ಹಿಂದುಗಳೇ ಆಗಿದ್ದು, ಬಲವಂತದ ಮೂಲಕ ಮಾನಪ್ರಾಣ ರಕ್ಷಣೆಗೆ ಹೆದರಿ ಮತಾಂತರಗೊಂಡ ಹೇಡಿಗಳಾಗಿದ್ದು ಅಂತವರನ್ನು ಮನಪರಿವರ್ತಿಸುವ ಕಾರ್ಯವಾಗಬೇಕು ಎಂದು ಬಜರಂಗದಳದ ರಾಷ್ಟ್ರೀಯ ಸಂಯೋಜಕ್ ರಾಜೇಶ್ ಪಾಂಡೆ ಹೇಳಿದ್ದಾರೆ.
ಶನಿವಾರ ನಗರದ ಸಂಘನಿಕೇತನದಲ್ಲಿ ಬಜರಂಗದಳ ಘಟಕ ಸಂಯೋಜಕರ ಪ್ರಾಂತ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಸಲ್ಮಾನ ಆಕ್ರಮಣಕಾರರ ಎದುರು ಪಲಾಯನ ಮಾಡಿದ ಹೇಡಿ ಹಿಂದುಗಳಾಗಿದ್ದಾರೆ. ಅವರ ಮನಪರಿವರ್ತನೆ ಮೂಲಕ ಅವರನ್ನು ವಾಪಸ್ ಹಿಂದು ಧರ್ಮಕ್ಕೆ ಕರೆ ತರುವ ಪ್ರಯತ್ನವಾಗಬೇಕು ಎಂದು ಕರೆ ನೀಡಿದರು.
ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಭಾರತದ ಶತ್ರು ಪಾಕಿಸ್ಥಾನಕ್ಕೆ ಬೆಂಬಲವಾಗಿರುವ ಚೀನಾದ ವಸ್ತುಗಳನ್ನು ಮತ್ತು ಚೀನಾ ವಸ್ತುಗಳನ್ನು ಖರೀದಿಸುವವರನ್ನು ಭಾರತೀಯರು ಬಹಿಷ್ಕರಿಸಬೇಕು. ಪಾಕಿಸ್ಥಾನ ಕಲಾವಿದರು ದೇಶಕ್ಕೆ ಆಗಮಿಸಲು ಅವಕಾಶ ಕಲ್ಪಿಸಬಾರದು. ಪಾಕ್ ಕಲಾವಿದರು ನಟಿಸಿರುವ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದರು.
ಸಂಘರ್ಷದಿಂದಲೇ ಹುಟ್ಟಿಕೊಂಡಿರುವ ಬಜರಂಗದಳ 32 ವರ್ಷಗಳ ಇತಿಹಾಸ ಹೊಂದಿದೆ. ದೇಶದ ಗಡಿ ಕಾಯುವ ಯೋಧರಂತೆ ದೇಶ, ಸಮಾಜ, ಸಂಸ್ಕೃತಿಗಳ ರಕ್ಷಣೆಯ ಹೊಣೆಯನ್ನು ಹೊತ್ತಿರುವ ಬಜರಂಗದಳ ಕಾರ್ಯಕರ್ತರು ಯೋಧರೇ ಆಗಿದ್ದಾರೆ. ದೇಶದೊಳಗೆ ರಾಕ್ಷಸೀ ಪ್ರವೃತ್ತಿಯ ಶಕ್ತಿಗಳನ್ನು ಹಿಮ್ಮೆಟ್ಟಿಸುವುದರಲ್ಲಿ ಯಾವುದೇ ರಾಜೀ ಇಲ್ಲ. ಗೋ ರಕ್ಷಣೆ, ಮಾತೆಯರ ರಕ್ಷಣೆ, ಸಾಧು, ಸಂತರುಗಳ ರಕ್ಷಣೆ, ದೇಶ ರಕ್ಷಣೆಗಾಗಿ ಬಜರಂಗದಳ ಯಾವುದೇ ತ್ಯಾಗಕ್ಕೂ ಸಿದ್ಧವಿರುವುದಾಗಿ ಘೋಷಿಸಿದರು.
ರಾಮ ಮಂದಿರ ನಿರ್ಮಾಣದ ಸಂಘರ್ಷದಲ್ಲಿ ಹುಟ್ಟಿಕೊಂಡ ಬಜರಂಗದಳ ಇಲ್ಲಿಯ ತನಕ 40 ಲಕ್ಷ ಗೋವುಗಳನ್ನು ಸಂರಕ್ಷಿಸಿದೆ. ಮತಾಂತರವನ್ನು ಬಜರಂಗದಳ ಸಹಿಸುವುದಿಲ್ಲ , ಲವ್‌ಜೆಹಾದ್ ನಡೆಸಲೂ ಅವಕಾಶ ನೀಡುವುದಿಲ್ಲ ಎಂದ ಅವರು, ಎಲ್ಲಾ ಕಾಲಗಳಲ್ಲೂ ಪ್ರತಿಯೊಂದು ರೂಪದಲ್ಲಿ ದೇವರು ಅವತಾರವೆತ್ತಿದ್ದಾನೆ. ಅದೇ ರೀತಿ ಪ್ರಸ್ತುತ ಸಂತ, ಗೋವು, ಧರ್ಮರಕ್ಷಣೆಯ ಕಾರ್ಯದಲ್ಲಿ ದೇವರ ಅವತಾರದ ಪ್ರತಿರೂಪವಾಗಿ ಪ್ರತೀ ಗ್ರಾಮದಲ್ಲಿ ಧರ್ಮರಕ್ಷಣೆಯ ಕಾರ್ಯಕ್ಕಿಳಿಯಬೇಕು ಎಂದು ಕರೆ ನೀಡಿದರು.
ಪಂಚಾತಾರ ಹೊಟೇಲುಗಳಲ್ಲಿ ಕುಳಿತು ಹೇಳಿಕೆ ನೀಡುವ ಬುದ್ಧಿಜೀವಿಗಳು ಹೇಳಿಕೆ ಅಸಹಿಷ್ಣುತೆ ಕುರಿತು ಮಾತನಾಡುತ್ತಾರೆ. ಹಿಂದುಗಳ ಹತ್ಯೆಯಾದಾಗ, ಪತ್ರಕರ್ತೆಯ, ಮಹಿಳಾ ಪೊಲೀಸ್ ಪೇದೆಯ ಮೇಲೆ ದೌರ್ಜನ್ಯಗಳಾದಾಗ, ಕಾಶ್ಮೀರ ಪಂಡಿತರನ್ನು ಹೊರದಬ್ಬಿದಾಗ, ಮುಂಬೈ ಅಮರ್‌ಜವಾನ್‌ಜ್ಯೋತಿಯನ್ನು ಪುಡಿಗಟ್ಟಿದಾಗ ಅಸಹಿಷ್ಣುತೆ ಬಗ್ಗೆ ಮಾತನಾಡುವುದಿಲ್ಲ, ಇಂತಹ ಬುದ್ಧಿ ಜೀವಿಗಳ ಹೇಳಿಕೆಗಳನ್ನು ನಿರ್ಲಕ್ಷಿಸಬೇಕು. ಅದರ ಹಿಂದೆ ಹೋಗಬಾರದೆಂದರು ಎಂದರು.
ಬಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್ ಮಾತನಾಡಿ, ಮಂಗಳೂರು ರಾಜ್ಯಾದಲ್ಲಿ ಹಿಂದುತ್ವ, ಸಂಘಟನೆಗೆ ಶಕ್ತಿ ಕೊಡುವ ನಾಡು. ಅನೇಕ ಮಂದಿಯ ಜೀವನ ತ್ಯಾಗದಿಂದ ಇಲ್ಲಿ ಸಂಘಟನೆ ಬಲಿಷ್ಠವಾಗಿದ್ದು ಸಂಘಟನೆಯ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲು ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಪ್ರತೀ ಹಳ್ಳಿ ಹಳ್ಳಿಗೂ ಸಂಘಟನೆ ವಿಸ್ತಾರಗೊಳ್ಳಬೇಕು. ಲವ್‌ಜೆಹಾದ್, ಮತಾಂತರ, ಅಸ್ಫೃಶ್ಯತೆ, ಜೆಹಾದಿನಿಂದ ನೆಲೆಕಳೆದುಕೊಂಡ ಹಿಂದುಗಳಿಗೆ ರಕ್ಷಣೆ ನೀಡುವ ನಿರ್ಣಯವನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಪ್ರೊ.ಎಂ.ಬಿ. ಪುರಾಣಿಕ್ ಮಾತನಾಡಿ, ಬಜರಂಗದಳ ಸದಸ್ಯರು ಕಾನೂನಿನ ಅರಿವನ್ನು ಹೊಂದಿಕೊಂಡು ಕಾರ್ಯನಿರ್ವಹಿಸಬೇಕು. ಅನಿವಾರ್ಯವಾದಲ್ಲಿ ಹೋರಾಟಕ್ಕೂ ಸಿದ್ದರಿರಬೇಕು. ನಿಸ್ವಾರ್ಥ ಸೇವೆಯನ್ನು ಹೊರತುಪಡಿಸಿ ಪ್ರಚಾರ, ರಾಜಕೀಯ ಆಕಾಂಕ್ಷೆಯನ್ನಿಟ್ಟುಕೊಂಡು ಕಾರ್ಯಪ್ರವೃತ್ತರಾಗಬಾರದು. ಜಾತೀಯತೆ, ಅಸ್ಪೃಶ್ಯತೆಗಳಂತಹವನ್ನು ಮೆಟ್ಟಿನಿಂತು ಎಲ್ಲರೊಂದಿಗೆ ಜೊತೆಗೂಡಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಟಿಪ್ಪು ದೇಶದ್ರೋಹಿ, ಹಿಂದು ಧರ್ಮ, ಕ್ರೈಸ್ತ ಮತ್ತು ಕನ್ನಡವಿರೋಧಿ. ರಾಜ್ಯಕ್ಕೆ ಉಪಯೋಗವಾಗುವ ಆಡಳಿತ ನೀಡದ ಆತನ ಜನ್ಮದಿನಾಚರಣೆ ಮಾಡಲು ಸರ್ಕಾರ ಮುಂದಾದರೆ ಬಜರಂಗದಳ ಸಂಘಟನೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಬಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್ ಎಚ್ಚರಿಸಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಜರಗಿದ ಬಜರಂಗದಳ ಪ್ರಾಂತ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಳೆದ ಬಾರಿಯೂ ತೀವ್ರ ವಿರೋಧದ ನಡುವೆಯೂ ಸರ್ಕಾರ ಎಚ್ಚರಿಕೆಯ ಮಾತನ್ನು ಕೇಳಿಲ್ಲ. ಈ ಬಾರಿಯೂ ಆಚರಣೆ ಮಾಡಲು ನಿರ್ಧರಿಸಿದೆ. ಇದರ ವಿರುದ್ಧ ಬಜರಂಗದಳ ನಿರ್ಣಯ ಕೈಗೊಳ್ಳಲಿದೆ. ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡುವಂತೆ ಮನವಿ ಮಾಡಿದ ಅವರು, ಆಚರಣೆಗೆ ಅವಕಾಶ ನೀಡಿದರೆ ರಾಜ್ಯಾದ್ಯಂತ ಸಂಘಟನೆ ಸುಮ್ಮನೆ ಕುಳಿತುಕೊಳ್ಳಲಾರದು ಎಂದು ಎಚ್ಚರಿಕೆ ನೀಡಿದರು.
‘ಉಡುಪಿ ಮಠಕ್ಕೆ ಬನ್ನಿ ..’
ಉಡುಪಿ ಮಠಕ್ಕೆ ಮುತ್ತಿಗೆ ಹಾಕುವ ನಿರ್ಧಾರವನ್ನು ಪ್ರಕಟಿಸಿರುವ ಸಂಘಟನೆಗಳು ಸಾಧ್ಯವಿದ್ದರೆ ಉಡುಪಿ ಮಠಕ್ಕೆ ಬರಲಿ. ನಿಮ್ಮ ಮುತ್ತಿಗೆಯನ್ನು ಬಜರಂಗದಳದ ಕಾರ್ಯಕರ್ತರು ತಡೆಯುವುದಾಗಿ ಸವಾಲು ಹಾಕಿದರು.
ವೇದಿಕೆಯಲ್ಲಿ ಬಜರಂಗದಳ ಕ್ಷೇತ್ರೀಯ ಸಂಯೋಜಕ ಸೂರ್ಯನಾರಾಯಣ, ವಿಹಿಂಪ ಪ್ರಾಂತ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಕಾರ್ಯದರ್ಶಿ ಗೋಪಾಲ್‌ಕುತ್ತಾರ್, ಬಜರಂಗದಳ ನಾಯಕರುಗಳಾದ ಕೇಶವ ನಾಯಕ್, ಸುನಿಲ್ ಉಪಸ್ಥಿತರಿದ್ದರು.
ರಾಜ್ಯದ21 ಜಿಲ್ಲೆಗಳ 520 ಮಂದಿ ಬಜರಂಗದಳ ಸಂಯೋಜಕರು ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ. ಉಮೇಶ್ ಕೊಡಿಯಾಲಬೈಲ್ ವೈಯಕ್ತಿಕ ಗೀತೆ ಹಾಡಿದರು. ರಘು ಸಕಲೇಶಪುರ ಸ್ವಾಗತಿಸಿದರು. ಮುರಳಿಕೃಷ್ಣ ಹಸಂತಡ್ಕ ನಿರೂಪಿಸಿದರು. ಸುನಿಲ್ ಕೆ.ಆರ್. ವಂದಿಸಿದರು.
Click this button or press Ctrl+G to toggle between Kannada and English