ಮಂಗಳೂರು: ರವಿವಾರ ರಾತ್ರಿ ಚಂದ್ರದರ್ಶನ ಆದ ಪ್ರಯುಕ್ತ ಕರಾವಳಿಯಾದ್ಯಂತ ಸೋಮವಾರದಿಂದ ಪವಿತ್ರ ರಂಜಾನ್ ಉಪವಾಸ ಆಚರಿಸಲಾಗುವುದು ಎಂದು ಮಂಗಳೂರಿನ ಖಾಝಿ ತ್ವಾಕ ಅಹಮದ್ ಮುಸ್ಲಿಯಾರ್ ತಿಳಿಸಿದ್ದಾರೆ. ರವಿವಾರ ರಾತ್ರಿಯಿಂದಲೇ ವಿಶೇಷ ತರಾವಿಹ ನಮಾಜು ಹಾಗೂ ವಿಶೇಷ ಪ್ರಾರ್ಥನೆಗಳು ಆರಂಭವಾಗಿದ್ದು, ಇಂದಿನಿಂದ (ಆಗಸ್ಟ್ ೧ ರಿಂದ) ಮುಸ್ಲಿಂ ಶ್ರುದ್ದಾಳುಗಳು ಉಪವಾಸ ಆಚರಿಸುತ್ತಾರೆ ಎಂದು ಅವರು ಹೇಳಿದರು.
ಉಡುಪಿಯಲ್ಲಿಯೂ ರವಿವಾರ ಚಂದ್ರದರ್ಶನ ಆಗಿದ್ದು ಆ.1ರಿಂದ ರಂಜಾನ್ ವ್ರತಾಚರಣೆ ಆರಂಭಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಸುನ್ನಿ ಜಮಾತ್ನ ಸಂಯುಕ್ತ ಖಾಝಿ ಮೌಲಾನಾ ಎ.ಪಿ.ಇಬ್ರಾಹಿಂ ಮುಸ್ಲಿಯಾರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English