ಇಬ್ರಾಹಿಂ ಕೋಡಿಜಾಲ್ ಅವರು ಸ್ತ್ರೀ ಸಮೂಹವನ್ನು ಅವಮಾನಿಸಿ ನೀಡಿರುವ ಹೇಳಿಕೆಗೆ ತಕ್ಷಣ ಕ್ಷಮೆ ಯಾಚಿಸಬೇಕು: ಸುಲೋಚನಾ ಜಿ.ಕೆ.ಭಟ್

12:22 PM, Tuesday, October 25th, 2016
Share
1 Star2 Stars3 Stars4 Stars5 Stars
(No Ratings Yet)
Loading...

Sulichana-bhatಮಂಗಳೂರು: ಮಹಿಳೆಯನ್ನು ಕೇವಲ ಭೋಗದ ವಸ್ತು ಎಂಬಂತೆ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅವರು ಸ್ತ್ರೀ ಸಮೂಹವನ್ನು ಅವಮಾನಿಸಿದ್ದಾರೆ. ಈ ರೀತಿ ಹೇಳಿಕೆ ನೀಡಿರುವ ಕೋಡಿಜಾಲ್ ಅವರು ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್ ಆಗ್ರಹಿಸಿದ್ದಾರೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷರ ಲೈಂಗಿಕ ಆಸಕ್ತಿ ಶಮನ ಮಾಡಲು ಮುಸ್ಲಿಂ ಸಮುದಾಯದಲ್ಲಿ ಬಹುಪತ್ನಿತ್ವ ಅಗತ್ಯವಾಗಿದೆ ಎಂಬ ಹೇಳಿಕೆಯನ್ನು ಇಬ್ರಾಹಿಂ ಕೋಡಿಜಾಲ್ ನೀಡಿ, ತಮ್ಮ ಮಾನಸಿಕತೆ ಪ್ರದರ್ಶಿಸಿದ್ದಾರೆ.

Sulichana-bhatಮಹಿಳಾ ಸಮುದಾಯವನ್ನು ಅಪಮಾನಿಸಿದ ಈ ಹೇಳಿಕೆಯನ್ನು ಕಾಂಗ್ರೆಸ್‌ನ ಯಾವೊಬ್ಬ ನಾಯಕರೂ ಖಂಡಿಸಿಲ್ಲ. ಇದು ಕಾಂಗ್ರೆಸ್‌ನ ಹೀನ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುದ್ರೋಳಿಯಲ್ಲಿ ವಿಧವೆಯರಿಗೆ ಕುಂಕುಮ ಭಾಗ್ಯ ನೀಡಿ ನೊಂದ ಮಹಿಳೆಯರಲ್ಲಿ ಬದುಕಿನ ಹೊಸ ಆಶಾ ಕಿರಣ ಮೂಡಿಸಿದ ಜನಾರ್ದನ ಪೂಜಾರಿಯವರೂ ಈ ಹೇಳಿಕೆಯ ವಿರುದ್ಧ ಧ್ವನಿಯೆತ್ತಿಲ್ಲವೇಕೆ ಎಂದು ಪ್ರಶ್ನಿಸಿದ ಸುಲೋಚನಾ ಭಟ್ ತ್ರಿವಳಿ ತಲಾಖ್‌ ವಿರುದ್ಧ ಮುಸ್ಲಿಂ ಮಹಿಳೆಯರು ಸೆಟೆದು ನಿಲ್ಲಬೇಕು. ಇವರಿಗೆ ಬೆಂಬಲವಾಗಿ ನಾವು ನಿಲ್ಲಲಿದ್ದೇವೆ. ಮುಸ್ಲಿಂ ಮಹಿಳೆಯರು ಸಂಘಟಿತರಾಗಿ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿಯಬೇಕು ಎಂದು ಕರೆ ನೀಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English