ವೈಜ್ಞಾನಿಕವಾಗಿ ಘನತ್ಯಾಜ್ಯ ವಸ್ತುಗಳ ಸಂಸ್ಕರಣೆ ಮತ್ತು ನಿರ್ವಹಣೆಗಾಗಿ ನೂತನ ಏಳು ಒಣಕಸ ಸಂಗ್ರಹಣಾ ವಾಹನಗಳಿಗೆ ಚಾಲನೆ

4:23 PM, Thursday, October 27th, 2016
Share
1 Star2 Stars3 Stars4 Stars5 Stars
(No Ratings Yet)
Loading...

harinathಮಂಗಳೂರು: ನಗರ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಘನತ್ಯಾಜ್ಯ ವಸ್ತುಗಳ ಸಂಸ್ಕರಣೆ ಮತ್ತು ನಿರ್ವಹಣೆಗಾಗಿ ನೂತನ ಏಳು ಒಣಕಸ ಸಂಗ್ರಹಣಾ ವಾಹನಗಳಿಗೆ ಮಹಾನಗರ ಪಾಲಿಕೆ ಕಚೇರಿ ಎದುರು ಮೇಯರ್ ಹರಿನಾಥ್ ಇಂದು ಚಾಲನೆ ನೀಡಿದರು.

ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವಂತೆ ಪಾಲಿಕೆ ವ್ಯಾಪ್ತಿಯಲ್ಲಿ ಹಸಿ ಕಸಗಳ ಸಂಗ್ರಹ ಹಿಂದಿನಂತೆ ವಾರದ ಏಳೂ ದಿನಗಳೂ ನಡೆಯಲಿದ್ದು, ಒಣಕಸ ಸಂಗ್ರಹ ಆಯಾ ವಾರ್ಡ್‍ಗಳಿಗೆ ನಿಗದಿಪಡಿಸಲಾದಂತೆ ವಾರಕ್ಕೊಮ್ಮೆ ನೂತನ ವಾಹನಗಳು ಸಂಚರಿಸಿ ಸಂಗ್ರಹ ಮಾಡಲಿವೆ ಎಂದರು.

ಪ್ರಸ್ತುತ ಹಸಿಕಸವನ್ನು ಸಂಗ್ರಹಿಸಿಕೊಂಡು ಬರುತ್ತಿರುವ ವಾಹನಗಳು ನಿತ್ಯವೂ ಬರಲಿವೆ. ಒಣಕಸವನ್ನು ಸಂಗ್ರಹಿಸಲು ವಾರದಲ್ಲಿ ಒಂದು ದಿನ ಪ್ರತ್ಯೇಕ ಹಳದಿ ಬಣ್ಣದ ಒಣಕಸ ಸಂಗ್ರಹಣಾ ವಾಹನ ಬರಲಿದೆ. ಈ ನೂತನ ವ್ಯವಸ್ಥೆಯನ್ನು ಸಾರ್ವಜನಿಕರು ಸಂಪೂರ್ಣವಾಗಿ ಬಳಸಿಕೊಂಡು ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಪಾಲಿಕೆಯ ಕಾರ್ಯದಲ್ಲಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಪೌರ ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ನಿಯಮ 2016ರ ನಿರ್ದೇಶನದನ್ವಯ ನಗರವನ್ನು ಸ್ವಚ್ಛ , ಸುಂದರ ಮತ್ತು ಹಸಿರು ನಗರವನ್ನಾಗಿಸಲು ಮೊದಲ ಹಂತದಲ್ಲಿ ಘನತ್ಯಾಜ್ಯವನ್ನು 2 ವಿಧದಲ್ಲಿ ವಿಂಗಡಿಸಬೇಕಾಗಿದೆ. ಈಗಾಗಲೇ ಪಾಲಿಕೆಯಲ್ಲಿ ಇ-ತ್ಯಾಜ್ಯ ಸಂಗ್ರಹಣೆಗೆ ಅವಕಾಶ ಕಲ್ಪಿಸಿದ್ದು ಮುಂದಿನ ಹಂತದಲ್ಲಿ ಈ ಬಗ್ಗೆಯೂ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆದಿದೆ ಎಂದರು.

ಕಸ ಸಂಗ್ರಹಣಾ ವಾಹನಗಳು ರಸ್ತೆಯಲ್ಲಿ ಬೇಕಾಬಿಟ್ಟಿ ನಿಲ್ಲಿಸಿ ಸಂಚಾರ ಅಡಚಣೆ ಮಾಡುವ ಅಥವಾ ತ್ಯಾಜ್ಯ ಸಂಗ್ರಹಿಸುವ ಕಾರ್ಮಿಕರ ಕುರಿತಾದ ದೂರುಗಳನ್ನು ಸ್ವೀಕರಿಸಲು ಪಾಲಿಕೆ ಕಚೇರಿಯಲ್ಲಿ ತೆರೆದಿರುವ ದೂರವಾಣಿ ಸಂಖ್ಯೆ 0824-4232666 ಅಥವಾ ವಾಟ್ಸಾಪ್ ನಂಬರ್ 7022977557 ಗೆ ಮಾಹಿತಿ ನೀಡಬಹುದಾಗಿದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English