ಮಂಗಳೂರು: ಕದ್ರಿ ಕ್ರಿಕೇಟರ್ಸ್ ರಿ. ದೀಪಾವಳಿ ಪ್ರಯುಕ್ತ ಆಯೋಜಿಸಿದ 9ನೇ ವರ್ಷದ ಮಣಿಕಾಂತ್ ಕದ್ರಿ ಸ್ಟಾರ್ ನೈಟ್, ದೀಪಾವಳಿ ಸಂಬ್ರಮದಲ್ಲಿದ್ದ ಮಂಗಳೂರಿಗರನ್ನು ಕದ್ರಿ ಮೈದಾನದಲ್ಲಿ ಭಾನುವಾರ ಮನರಂಜಿಸಿತು.
5 ಜನ ಯೋಧರ ಜೊತೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪ ದೀಪಬೇಳಗಿಸಿ ಸಂಗೀತ ರಸ ಸಂಜೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಯೋಧರಿಗೆ, ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾಜಸೇವಕ ಬದ್ರಿನಾಥ್ ಕಾಮತ್ ತಲಾ ಹತ್ತು ಸಾವಿರ ರೂಪಾಯಿ ನಗದನ್ನು 5 ಜನ ಯೋಧರಿಗೆ ಕೊಡುಗೆಯಾಗಿ ನೀಡಿದರು. ಯಡ್ಯೂರಪ್ಪ ಯೋಧರನ್ನು ಸಾಲು ಹೊದಿಸಿ ನಗದು ನೀಡಿ ಸನ್ಮಾನಿಸಿದರು.
ಈ ಸಂದರ್ಭ ನಿರೂಪಕಿ ಅನುಶ್ರೀ, ಡ್ರಾಮ ಜೂನಿಯರ್ ಖ್ಯಾತಿಯ ಚೈತ್ರಾಲಿ, ತುಳು ನಟರಾದ ದೇವದಾಸ್ ಕಾಪಿಕಾಡ್. ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರು, ನವೀನ್ ಡಿ ಪಡೀಲ್ ಹಾಗೂ ಸಂಗೀತ ದಿಗ್ಗಜರಾದ ಸುಪ್ರಿಯಾ ಲೋಹಿತ್, ಸಂತೋಷ್ ವೆಂಕಿ. ನಕುಲ್ ಅಭಯಂಕರ್, ಸರಿಗಮಪ ಖ್ಯಾತಿಯ ಶ್ರೀ ರಾಮ್ ಕಾಸರ್ ಸ್ಥಳಿಯರಾದ ದೆಹಲಿ ಗಣರಾಜ್ಯ ಪರೇಡ್ ನಲ್ಲಿ ಭಾಗವಹಿಸಿದ ಸವಿತಾ ಕದ್ರಿ, ಚೋಟ ರಿಪೋರ್ಟರ್ ಖ್ಯಾತಿಯ ಶ್ರೇಯಾದಾಸ್ ಇವರುಗಳನ್ನು ಸನ್ಮಾನಿಸಲಾಯಿತು.
ನಳಿನ್ ಕುಮಾರ್ ಕಟೀಲ್, ಜೆ.ಆರ್ ಲೋಬೋ, ನಾಗರಾಜ ಶೆಟ್ಟಿ, ಸುರೇಶ್ ಬಳ್ಳಾಲ್, ದೇವಿ ಪ್ರಸಾದ್ ಶೆಟ್ಟಿ, ಯುಪಿಸಿಯಲ್ ಕಿಶೋರ್ ಆಳ್ವ, ವೇದವ್ಯಾಸ ಕಾಮತ್, ಗಣೇಶ್ ಕಾಣರ್ಿಕ್, ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ರಾಖೇಶ್ ಮಲ್ಲಿ, ಶ್ರೀಕಾಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮಣಿಕಾಂತ್ ಕದ್ರಿ, ವಿಸ್ಮಯ ವಿನಾಯಕ್ ಸಂಗೀತ ರಸಮಂಜರಿ, ಸನಾತನ ನಾಟ್ಯಾಲಯದ ಸದಸ್ಯರಿಂದ ವೀರ ಸಾರ್ವಕರ್ ಮತ್ತು ಸ್ವಾಮಿ ವಿವೇಕಾನಂದ ನೃತ್ಯ ರೂಪಕ, ದೇಶಭಕ್ತಿಗೀತೆಗಳು ಪ್ರೇಕ್ಷಕರನ್ನು ರಂಜಿಸಿತು.
Click this button or press Ctrl+G to toggle between Kannada and English