ಮಂಜೇಶ್ವರ: ಕೇರಳದ ಎಡರಂಗ ಸರಕಾರದ ಆಡಳಿತ ರಾಜ್ಯದ ಜನತೆಯನ್ನು ಉಪವಾಸಕ್ಕೆ ತಳ್ಳುತ್ತಿದೆ. ಕಳೆದ ನಾಲ್ಕು ತಿಂಗಳ ಎಡರಂಗದ ಸಾಧನೆ ಹಲವಾರು ರಾಜಕೀಯ ಕೊಲೆಗಳು, ಸ್ವಜನ ಪಕ್ಷಪಾತ, ಪಡಿತರ ವ್ಯವಸ್ಥೆಯ ಬುಡಮೇಲುಗಳು ಮಾತ್ರವೆಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಪ್ರಮೀಳಾ ಸಿ,ನಾಯ್ಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಜೇಶ್ವರ ಪಂಚಾಯತ್ ಬಿಜೆಪಿ ಸಮಿತಿ ನೇತೃತ್ವದಲ್ಲಿ ಮಂಗಳವಾರ ವಿವಿಧೆಡೆ ನಡೆದ ರಾಜ್ಯ ಸರಕಾರದ ಜನದ್ರೋಹಿ ಆಡಳಿತ ವಿರುದ್ದದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಂಜೇಶ್ವರದಲ್ಲಿ ನಡೆದ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ, ಎಡರಂಗದ ಆಡಳಿತ ಶೈಲಿಯನ್ನು ಖಂಡಿಸಿ, ಆಧುನೀಕರಣಗೊಳ್ಳದ ಪಡಿತರ ವ್ಯವಸ್ಥೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ಯತಾರ್ಥ ಜನರನ್ನು ಗುರುತಿಸದೆ ಗೊಂದಲಗಳಿಗೆ ಕಾರಣವಾದ ಅಂಶಗಳನ್ನು ಲೇವಡಿಗೈದರು.
2016 ಕ್ಕೆ ರಾಜ್ಯಾದ್ಯಂತ ನೂತನ ನವೀಕೃತ ಪಡಿತರ ಚೀಟಿ ಅನುಮತಿಸಬೇಕಿದ್ದರೂ ಈವರೆಗೆ ಕೊಡದಿರುವ ರಾಜ್ಯ ಸರಕಾರದ ಕ್ರಮ ಸರಕಾರದ ದೃಷ್ಟಿಕೋನದ ಸಂಕೇತವಾಗಿದೆ. ಕೇಂದ್ರದ ಆಹಾರ ಭದ್ರತಾ ಕಾಯ್ದೆಯಡಿ ರಾಜ್ಯ ಸರಕಾರ ತೋರಿಸಿರುವ ನಿರ್ಲಕ್ಷ್ಯ ಲಕ್ಷಾಂತರ ಬಡ ಜನರನ್ನು ದಿಕ್ಕೆಡುವಂತೆ ಮಾಡಿದೆಯೆಂದು ತಿಳಿಸಿದರು.
ಕುಂಜತ್ತೂರು, ಮಂಜೇಶ್ವರ, ಅಂಗಡಿಪದವು ಪಡಿತರ ಕೇಂದ್ರಗಳ ಮುಂದೆ ನಡೆಸಲಾದ ಧರಣಿಗಳಲ್ಲಿ ಮುಖಂಡರುಗಳಾದ ಹರಿಶ್ಚಂದ್ರ ಮಂಜೇಶ್ವರ, ಯಾದವ ಬಡಾಜೆ, ಪದ್ಮನಾಭ ಕಡಪ್ಪರ, ತಾರಾನಾಥ, ಕೇಶವ ಕನಿಲ, ವಿನ್ಸಿ ಡಿಸಿಲ್ವ, ಬಾಬು ಮಾಸ್ತರ್, ಚಂದ್ರಹಾಸ ಸುವರ್ಣ, ಅವಿನಾಶ್ ಕೀರ್ತೇಶ್ವರ, ಸುನಿಲ್ ಕೀರ್ತೇಶ್ವರ, ಜನಾರ್ಧನ್, ಗ್ರಾಮ ಪಂಚಾಯತ್ ಪ್ರತಿನಿಧಿಗಳು ಉಪಸ್ಥಿತರಿದ್ದರು. ರಾಜೇಶ್ ತೂಮಿನಾಡು ಸ್ವಾಗತಿಸಿ, ಸಂತೋಷ್ ಅಡ್ಕ ವಂದಿಸಿದರು.
Click this button or press Ctrl+G to toggle between Kannada and English