ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ತೆರೆಯಬೇಕೆಂಬ ಬೇಡಿಕೆ ಬಲಗೊಳ್ಳುತ್ತಿದೆ. ಸಂಚಾರಿ ಪೀಠಕ್ಕೆ ನ್ಯಾಯವಾದಿಗಳು ಆಗ್ರಹಿಸುತ್ತಿರುವಾಗಲೇ ಅವರ ಬೇಡಿಕೆಗೆ ವಿವಿಧ ಸಂಘ ಸಂಸ್ಥೆಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ.
ಕಲಬುರಗಿ ಮತ್ತು ಧಾರವಾಡದಲ್ಲಿ ಆರಂಭಿಸಿದಂತೆ ಮಂಗಳೂರಿನಲ್ಲಿಯೂ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸಬೇಕೆಂದು ನಮ್ಮ ಮನೆ ನಮ್ಮ ಊರು ವೇದಿಕೆ ಹಾಗೂ ಸರ್ಕಾರೇತರ ಸಂಘಟನೆಗಳ ಒಕ್ಕೂಟ ಸರ್ಕಾರವನ್ನು ಆಗ್ರಹಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆಯ ಪ್ರಧಾನ ಸಂಯೋಜಕ ಬಿ.ಎಸ್.ಚಂದ್ರು, ಬೇಡಿಕೆ ಈಡೇರಿಕೆಗಾಗಿ ಒಂದು ತಿಂಗಳೊಳಗೆ ಹೋರಾಟ ಆರಂಭಿಸುವುದಾಗಿ ತಿಳಿಸಿದರು.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕಾರವಾರ ಮತ್ತು ಕೊಡಗು ಜಿಲ್ಲೆಗಳು ರಾಜಧಾನಿ ಬೆಂಗಳೂರಿನಿಂದ ದೂರದಲಿದ್ದು, ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿ ನ್ಯಾಯ ಪಡೆಯಬೇಕಾದಲ್ಲಿ ಸಮಯ ಮತ್ತು ಆರ್ಥಿಕ ಹೊರೆ ಅನುಭವಿಸಬೇಕಾಗಿದೆ. ಮಂಗಳೂರಿನಲ್ಲಿಯೇ ಸಂಚಾರಿ ಪೀಠ ಸ್ಥಾಪನೆಯಾದರೆ ಈ ಭಾಗದ ಜನತೆಯ ಸಂಕಷ್ಟ ಕಡಿಮೆಯಾಗಲಿದೆ ಎಂದರು.
Click this button or press Ctrl+G to toggle between Kannada and English