ಮಂಗಳೂರು: ಪುತ್ತೂರು ಪೆರಿಗೇರಿ ಪಾದೆಕರಿಯದಲ್ಲಿ ನಡೆದ ದರೋಡೆ ಪ್ರಕರಣವನ್ನು ಬೇಧಿಸಿರುವ ದ.ಕ. ಜಿಲ್ಲಾ ಪೊಲೀಸರು 12 ಮಂದಿ ಆರೋಪಿಗಳ ಪೈಕಿ 10 ಮಂದಿಯನ್ನು ಬಂಧಿಸಿ, 2 ವಾಹನಗಳ ಸಹಿತ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್‌ಪಿ ಭೂಷಣರಾವ್ ಬೊರಸೆ, ಕೃತ್ಯ ನಡೆಸಿದ 12 ಮಂದಿಯ ಪೈಕಿ 10 ಮಂದಿಯನ್ನು ಬಂಧಿಸಲಾಗಿದೆ. 50 ಸಾವಿರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣ, 7 ಲಕ್ಷ ರೂ. ಮೌಲ್ಯದ ಕ್ಸೈಲೋ ಕಾರು ಮತು 3 ಲಕ್ಷ ರೂ. ಮೌಲ್ಯದ ಅಲ್ಟೋ ಕಾರು, 4 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಕೃಷ್ಣ ಶೆಟ್ಟಿ (35), ಮಿಲನ್ (24), ರೂಪೇಶ್‌ಕುಮಾರ್ (26), ಮಿಲ್ಟನ್ ಆಲ್ವೀನ್ ಪಿಂಟೋ (24), ಭರತ್ (19), ರಾಕೇಶ್ (19), ರತನ್ (25), ಸುರೇಶ್ ಆಚಾರ್ಯ ಎಂ. (34), ಪ್ರವೀಣ್ ಕುಮಾರ್ (23) ಹಾಗೂ ವಿಜಯ ಕುಮಾರ್ (24) ಬಂಧಿತರು.
ದರೋಡೆ ತಂಡದ ಪ್ರಮುಖ ರೂವಾರಿ ಮಂಗಳೂರು ತಾಲೂಕಿನ ಕಾಟಿಪಳ್ಳದ ಯಶೋಧರ ಶೆಟ್ಟಿ ಯಾನೆ ಯಶು (38) ಮತ್ತು ತೋಕೂರು ಜೋಗಟ್ಟೆಯ ನಾಗೇಶ್ ತಲೆಮರೆಸಿಕೊಂಡಿದ್ದು, ಶೀಘ್ರ ಬಂಧನವಾಗಲಿದೆ. ಬಂಧಿತರ ಗುರುತುಪತ್ತೆ ನಡೆಯಲು ಬಾಕಿಯಿರುವುದಾಗಿ ತಿಳಿಸಿದರು.
Click this button or press Ctrl+G to toggle between Kannada and English