ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಗೆಲುವಿಗಾಗಿ ಕುದ್ರೋಳಿಯಲ್ಲಿ ವಿಶೇಷ ಪೂಜೆ

3:19 PM, Monday, November 7th, 2016
Share
1 Star2 Stars3 Stars4 Stars5 Stars
(No Ratings Yet)
Loading...

pray-for-kudroliಮಂಗಳೂರು: ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಗೆಲುವಿಗಾಗಿ ಹಿರಿಯ ಕಾಂಗ್ರೆಸ್‌ ನಾಯಕ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಗೋಕರ್ಣನಾಥ ದೇವರಿಗೆ ಅಭಿಷೇಕ ಹಾಗೂ ಕೃಷ್ಣ ದೇವರಿಗೆ ವಿಶೇಷ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿ, ಹಿಲರಿ ಕ್ಲಿಂಟನ್‌ಗೆ ಇಡೀ ಜಗತ್ತನ್ನು ಕಾಪಾಡುವ ಶಕ್ತಿ ಇದೆ. ಆಕೆ ಪಾಕಿಸ್ತಾನ ಪರವಾದ ನಿಲುವನ್ನು ಹೊಂದಿಲ್ಲ. ಭಾರತ ಪರವಾಗಿಯೇ ಇದ್ದಾರೆ. ಅಮೆರಿಕಾದಲ್ಲಿ ಇರುವ ಅನಿವಾಸಿ ಭಾರತೀಯರೂ ಹಿಲರಿ ಕ್ಲಿಂಟನ್ ಜೊತೆಗಿದ್ದಾರೆ.

ಡೊನಾಲ್ಡ್ ಟ್ರಂಪ್ ಗೆದ್ದರೆ ಜಗತ್ತಿಗೆ ಅಪಾಯ ಇದೆ. ಆತ ವಿಚಿತ್ರ ವ್ಯಕ್ತಿ. ಆತ ಯಾರ ಮಾತನ್ನೂ ಕೇಳುವ ವ್ಯಕ್ತಿ ಅಲ್ಲ. ಆತ ಗೆದ್ದರೆ ಹೈಡ್ರೋಜನ್ ಬಾಂಬ್ ಉಪಯೋಗಿಸುತ್ತಾನೆ. ಆತ ಏನು ಮಾಡುತ್ತಾನೆ ಎಂದು ಊಹಿಸಲಾಗದ ವ್ಯಕ್ತಿತ್ವ. ಆತನಿಂದಾಗಿ ಭಾರತವೂ ಉಳಿಯಲಾರದು. ಹೀಗಾಗಿ ಟ್ರಂಪ್‌ನ ಬಗ್ಗೆ ಹೆಚ್ಚಿನ ದೇಶಗಳು ಚಿಂತೆಗೆ ಒಳಗಾಗಿವೆ ಎಂದರು.

ಆರಂಭದ ಚುನಾವಣಾ ಪ್ರಚಾರದಲ್ಲಿ ಟ್ರಂಪ್‌ಗಿಂತ ಹಿಲರಿ ಶೇ. 12ರಷ್ಟು ಹಿನ್ನಡೆಯಲ್ಲಿದ್ದರು. ಈಗ ಹಿಲರಿ ಶೇ. 46 ಹಾಗೂ ಟ್ರಂಪ್ ಶೇ. 43 ಅಂಕಗಳಲ್ಲಿ ಇದ್ದಾರೆ. ಅಂದರೆ ಶೇ. 3 ಅಂತರದಲ್ಲಿದ್ದಾರೆ. ನ. 9ರಂದು ಫಲಿತಾಂಶದಲ್ಲಿ ಏನೋ ಆಗಬಹುದು. ಹಾಗಾಗಿ ಇಡೀ ದೇಶದ ಜನತೆ ಹಿಲರಿ ಕ್ಲಿಂಟನ್ ಗೆಲುವಿಗಾಗಿ ಪ್ರಾರ್ಥಿಸಬೇಕಾಗಿದೆ. ಮಂದಿರ, ಮಸೀದಿ, ಚರ್ಚ್‌ ಹಾಗೂ ಗುರುದ್ವಾರಗಳಲ್ಲಿ ದೇಶ ಹಾಗೂ ಜಗತ್ತಿನ ಹಿತಕ್ಕಾಗಿ ಒಗ್ಗಟ್ಟಿನಿಂದ ಪ್ರಾರ್ಥನೆ, ಹರಕೆಗಳನ್ನು ಸಲ್ಲಿಸಬೇಕಾಗಿದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English