ಮಂಗಳೂರು: ಮಹಿಳೆಯರ ಸಶಕ್ತೀಕರಣಕ್ಕೆ ಕಾಂಗ್ರೆಸ್ ಪಕ್ಷ ಮಾಡಿದಷ್ಟು ಕೆಲಸ ಇತರ ಯಾವುದೇ ಪಕ್ಷಗಳು ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಪಟ್ಟರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಶಾಂತಿ ನಿಲಯದಲ್ಲಿ ಆಯೋಜಿಸಲಾದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಇತಿಹಾಸವುಳ್ಳ ಪಕ್ಷ. ಎಲ್ಲ ಜಾತಿ, ಧರ್ಮಗಳ ಜನರು ಈ ಪಕ್ಷದಲ್ಲಿದ್ದು, ಮಹಿಳೆಯರಿಗೆ ಹೆಚ್ಚು ಗೌರವ ಹಾಗೂ ಮೀಸಲಾತಿ ಒದಗಿಸಿದೆ. ಈ ಪಕ್ಷವನ್ನು ಒಬ್ಬ ಸಮರ್ಥ ನಾಯಕಿಯಾಗಿ ಬೆಳೆಸಿದವರು ಇಂದಿರಾ ಗಾಂಧಿ. ಬಡವರಿಗೆ ಕಾಂಗ್ರೆಸ್‌ನಿಂದ ಯಾವತ್ತೂ ಅನ್ಯಾಯವಾಗಿಲ್ಲ, ಹಾಗೆಯೇ ಶ್ರೀಮಂತರಿಗೆ ಬಿಜೆಪಿಯವರಿಂದ ಅನ್ಯಾಯವಾಗಿಲ್ಲ ಎಂದರು.
ಇಂದಿರಾ ಗಾಂಧಿ ಅವರ ಹುಟ್ಟು ಹಬ್ಬದ ಅಂಗವಾಗಿ ರಾಯಚೂರಿನಲ್ಲಿ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿತ್ತು. ಆದರೆ ಈ ರಾಜ್ಯಮಟ್ಟದ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ನಡೆಸಲಾಗುವುದು. ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಿಗೆ ಇದೊಂದು ಉತ್ತಮ ಅವಕಾಶ. ಎಲ್ಲ ಸಮುದಾಯದ ಜನರನ್ನು ಸೇರಿಸುವ ಕೆಲಸ ಮಾಡಿ. ಪ್ರತೀ ಬ್ಲಾಕ್, ಘಟಕಗಳಲ್ಲಿ ಇಂದಿರಾ ಗಾಂಧಿಯವರ ಜನ್ಮದಿನ ಆಚರಿಸುವ ಮೂಲಕ ಪಕ್ಷವನ್ನು ಬಲಯುತಗೊಳಿಸಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಮಹಿಳೆ ರಾಜಕೀಯವಾಗಿ ಹಾಗೂ ಸಮಾಜಕ್ಕೆ ಕೊಂಡಿಯಾದಾಗ ಪಕ್ಷ ಬೆಳೆಯಲು ಸಾಧ್ಯ. ರಾಜಕೀಯ ಸುಲಭವಿಲ್ಲ. ಆದರೆ ಎಲ್ಲವನ್ನೂ ಎದುರಿಸಿಕೊಂಡು ನಾನೇನು ಎಂದು ತೋರಿಸಿದಲ್ಲಿ ಸಮಾಜದಲ್ಲಿ ನಾಯಕಿಯಾಗಲು ಸಾಧ್ಯ. ಸರಕಾರ ಸೌಲಭ್ಯಧಿಗಳ ಸರಮಾಲೆಯನ್ನೇ ಜಾರಿಗೆ ತಂದಿದ್ದರೂ ಪ್ರಚಾರ ಸರಿಯಾಗಿ ನಡೆಧಿದಿಲ್ಲ. ಕೇವಲ ಭಾಷಣದಿಂದ ಪಕ್ಷ ಸಂಘಟನೆಯಾಗುವುದಿಲ್ಲ. ಪ್ರತೀ ಬೂತ್‌ಗಳಿಗೆ ತೆರಳಿ ಪಕ್ಷದ ಸಂಘಟನೆ ಮಾಡಬೇಕು ಎಂದರು.
ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ’ಸೋಜಾ ಮಾತನಾಡಿ, ಮಹಿಳೆಯರಿಗೆ ಸಮಾಜದಲ್ಲಿ ಅತ್ಯುನ್ನತ ಸ್ಥಾನವಿದೆ. ವಿದ್ಯಾವಂತ ಮಹಿಳೆಯಿಂದ ಇಡೀ ಕುಟುಂಬವೇ ವಿದ್ಯಾವಂತವಾಗುತ್ತದೆ. ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಮುಖ್ಯ ವಾಹಿನಿಗೆ ತಂದಿದೆ. ಹಲವು ಅಭಿವೃದ್ಧಿ ಕ್ರಮಗಳನ್ನು ಕಾಂಗ್ರೆಸ್ ಕೈಗೊಂಡಿದೆಯಾದರೂ ಮಹಿಳೆಯರಿಗೆ ಯಾವ ನೀತಿಯನ್ನು ಬಿಜೆಪಿ ಜಾರಿಗೆ ತಂದಿದೆ ಎಂದು ಕೇಳಿದರೆ ಅವಧಿರಲ್ಲಿ ಉತ್ತರವಿಲ್ಲ. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಅಧಿಕವಾಗಿತ್ತು. ಜೈಲು ಸೇರಿ¨ªೇ ಬಿಜೆಪಿಗರ ಸಾಧನೆಯಾಗಿತ್ತು. ಜನರಿಗಾಗಿ ಹಲವು ಯೋಜನೆಗಳನ್ನು ಸರಕಾರ ತಂದಿದ್ದರೂ ಪ್ರಚಾರದಲ್ಲಿ ಎಲ್ಲೋ ಒಂದು ಕಡೆಯಲ್ಲಿ ನಾವು ಎಡವಿದ್ದೇವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನ ನೀತಿ, ಸಿದ್ಧಾಂತಗಳನ್ನು ಪ್ರಚಾರ ಮಾಡುವ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜೆ.ಆರ್. ಲೋಬೊ, ಕೇವಲ ಸಮಾರಂಭಗಳಿಂದ ಪಕ್ಷ ಬಲವರ್ಧನೆಯಾಗುವುದಿಲ್ಲ. ಪ್ರತಿ ಬೂತ್‌ಮಟ್ಟದಲ್ಲಿ 10 ಮಹಿಳಾ ಕಾರ್ಯಕರ್ತೆಯರನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಕ್ರಿಯಾಶೀಲರನ್ನಾಗಿ ಮಾಡಬೇಕು. ಹೀಗಾದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಎಲ್ಲ ಬೂತ್‌ಗಳಲ್ಲಿ 2,200 ಸಕ್ರಿಯ ಕಾರ್ಯಕರ್ತನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಪಕ್ಷಕ್ಕಾಗಿ ದುಡಿದ ಹಿರಿಯ ರಾದ ಪದ್ಮಾವತಿ, ದೇವಕಿ, ರಾಜೀವಿ ಅವರನ್ನು ಸಮ್ಮಾನಿಸಲಾಯಿತು.
ಮುಡಾದ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಕಾಂಗ್ರೆಸ್ ಮುಖಂಡರಾದ ಸುರೇಶ್ ಬಲ್ಲಾಳ್, ಶಶಿಧರ್ ಹೆಗ್ಡೆ, ವಿಶ್ವಾಸ್‌ಕುಮಾರ್ ದಾಸ್, ಸಂಶುದ್ದೀನ್, ಪ್ರೇಮ್, ಟಿ.ಕೆ. ಸುಧೀರ್, ಬಾಲಕೃಷ್ಣ ಶೆಟ್ಟಿ, ನಮಿತಾ ಡಿ. ರಾವ್, ಶಶಿಕಲಾ ಕದ್ರಿ, ಸಬಿತಾ ಮಿಸ್ಕಿತ್, ಆಶಾ ಡಿಸಿಲ್ವಾ, ನಾಗವೇಣಿ, ಲತಾ ಸಾಲ್ಯಾನ್, ಶೈಲಜಾ, ಶೋಭಾ ಕೇಶವ, ಝುಬೈದಾ ಅಜೀಝ್, ಪ್ರತಿಭಾ ಕುಳಾಯಿ, ಆಶಾ ಡಿಸಿಲ್ವ, ಅಪ್ಪಿ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English