ಕಾರು ಹಾಗೂ ಬೈಕ್ ಮಧ್ಯೆ ಭೀಕರ ಅಪಘಾತ: ಸಹೋದರ, ಸಹೋದರಿ ಸಾವು

1:03 PM, Tuesday, November 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

Car- bike Accidentಮಂಗಳೂರು: ಕಾರು ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಸಹೋದರ ಹಾಗೂ ಸಹೋದರಿ ಸಾವನ್ನಪ್ಪಿರುವ ಘಟನೆ ಬಜತ್ತೂರು ಗ್ರಾಮದ ಬೆದ್ರೋಡಿ ಬಳಿ ನಡೆದಿದೆ.

ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ನೀರಪಾದೆ ಜನಾರ್ದನ ಆಚಾರ್ಯ ಎಂಬುವರ ಮಗ ಶಿವಾನಂದ (19) ಹಾಗೂ ಆತನ ಅಕ್ಕ ಅಕ್ಷತಾ (25) ಮೃತರು.

ಇನ್ನು, ಅಪಘಾತದಿಂದಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಿನಲ್ಲಿದ್ದ ಹಾಸನ ಮೂಲದ ಹರ್ಷ (30), ಅವರ ಪತ್ನಿ ಶುಭಶ್ರೀ (25), ತಂದೆ ಶಿವಯ್ಯ (55), ತಾಯಿ ಕಮಲಮ್ಮ (50), ಅಜ್ಜಿ ಸರ್ವಮಂಗಳ (60) ಗಾಯಗೊಂಡಿದ್ದಾರೆ. ಇವರಲ್ಲಿ ಶಿವಯ್ಯ ಹಾಗೂ ಶುಭಶ್ರೀ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನೀರಪಾದೆಯ ಶಿವಾನಂದ ಅವರು ತನ್ನ ಅಕ್ಕ ಅಕ್ಷತಾಳೊಂದಿಗೆ ಗೋಳಿತೊಟ್ಟುವಿನ ಅನಿಲ ಎಂಬಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ಬೈಕ್‌ಲ್ಲಿ ತೆರಳುತ್ತಿದ್ದರು. ಈ ವೇಳೆ ಬೆದ್ರೋಡಿ ಎಂಬಲ್ಲಿ ಇವರ ಬೈಕ್‌ಗೆ ಅತೀ ವೇಗದಿಂದವಿರುದ್ಧ ದಿಕ್ಕಿನಲ್ಲಿ ಬಂದ ವ್ಯಾಗನರ್ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ರಸ್ತೆ ಬದಿಯ ಸುಮಾರು ಆರು ಅಡಿ ತೋಡಿಗೆ ಉರುಳಿಬಿದ್ದಿದೆ. ಕಾರು ಅಲ್ಲೇ ಪಕ್ಕದಲ್ಲಿದ್ದ ತೋಟದಲ್ಲಿ ಅಡಿಮೇಲಾಗಿ ಬಿದ್ದಿದೆ.

ಕಾರಿನಲ್ಲಿದ್ದ ಹರ್ಷ ಹಾಗೂ ಶುಭಶ್ರೀಗೆ ನ. 5ರಂದು ಮದುವೆಯಾಗಿದ್ದು, ಇವರು ಕುಟುಂಬ ಸಮೇತರಾಗಿ ಕಟೀಲು ದೇವಸ್ಥಾನಕ್ಕೆಂದು ತೆರಳುತ್ತಿದ್ದರು. ಬೆದ್ರೋಡಿ ಬಳಿ ಏಕಾಏಕಿ ಕಾರು ಚಾಲಕ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅತೀ ವೇಗದಲ್ಲಿ ಬಂದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English