`ಹೈದರಾಲಿ-ಟಿಪ್ಪು ಇತಿಹಾಸ ಕಥನ’ ಕೃತಿ ಬಿಡುಗಡೆ

2:46 PM, Wednesday, November 9th, 2016
Share
1 Star2 Stars3 Stars4 Stars5 Stars
(No Ratings Yet)
Loading...

tippu-ithihasa-kathanaಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಬಾರ್ಕೂರ್‌ ಉದಯ ರಚಿಸಿದ `ಹೈದರಾಲಿ-ಟಿಪ್ಪು ಇತಿಹಾಸ ಕಥನ’ ಕೃತಿಯನ್ನು ಮಂಗಳವಾರ ಬಿಡುಗಡೆಗೊಳಿಸಲಾಯಿತು.

ಮಂಗಳವಾರ ಸಂಜೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋವಿಂದದಾಸ ಕಾಲೇಜಿನ ಉಪನ್ಯಾಸಕ ಪ್ರೋ ಕೃಷ್ಣಮೂರ್ತಿ ಪುಸ್ತಕ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ವಸಾಹತುಶಾಹಿಯ ವಿರುದ್ಧ ಸಿಡಿದೆದ್ದಿದ್ದ ಟಿಪ್ಪು ಸುಲ್ತಾನ್ ಎಂದೂ ಅಸಹಿಷ್ಣು ಆಗಿರಲಿಲ್ಲ. ಆತ ಸದಾ ಸಹಿಷ್ಣು ಆಗಿದ್ದ ಮತ್ತು ರಾಜಧರ್ಮ ಪಾಲಿಸುತ್ತಿದ್ದ. ತನ್ನ ರಾಜ್ಯದ ದೇವಾಲಯಗಳಿಗೆ ನೀಡಿದ ಕೊಡುಗೆಗಳ ಬಗ್ಗೆ ದಾಖಲೆಗಳಿದ್ದರೂ ಅದನ್ನು ಮರೆಮಾಚಲಾಗುತ್ತಿದೆ.

ಸಾಮ್ರಾಜ್ಯ ವಿಸ್ತರಣೆ ಸಂದರ್ಭ ದೇವಾಲಯಗಳನ್ನು ಕೆಡವಿರಬಹುದು. ಅದು ಧಾರ್ಮಿಕ ಅಸಹಿಷ್ಣುತೆಯಿಂದ ಅಲ್ಲ ಎಂಬುದನ್ನು ತಿಳಿಯುವ ಅಗತ್ಯವಿದೆ ಎಂದರು.

tippu-ithihasa-kathanaದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಅಧ್ಯಕ್ಷತೆ ವಹಿಸಿದ್ದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಜೆಡಿಎಸ್ ದ.ಕ.ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ವಿಟ್ಲ, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮುಮ್ತಾಝ್ ಅಲಿ, ಜಮೀಯ್ಯತಯಲ್ ಫಲಾಹ್ ದ.ಕ.-ಉಡುಪಿ ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ. ಅಸ್ಲಂ ಉಪಸ್ಥಿತರಿದ್ದರು.

tippu-ithihasa-kathana

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English