ಮಂಗಳೂರು: ಸಿಎಂ ಅವರೇ, ನಿಮಗೆ ನೈತಿಕತೆಯಿದ್ದರೆ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಸಂಜೆಯೊಳಗೆ ಸಚಿವ ಸಂಪುಟದಿಂದ ವಜಾ ಮಾಡಿ ಎಂದು ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, `ಸಿಎಂ ಅವರೇ ತನ್ವೀರ್ ಸೇಠ್ ರಾಜೀನಾಮೆ ತೆಗೆದುಕೊಳ್ಳಲು ಆಗದಿದ್ದರೆ. ಅದನ್ನು ಜನತೆಯ ಮುಂದೆ ನೀವು ದುರ್ಬಲಾಗಿದ್ದೀರಿ ಎಂಬುದನ್ನು ಒಪ್ಪಿಕೊಳ್ಳಿ. ಈಗ ನೀವು ನಿದ್ದೆ ಮಾಡಿದರೆ ಚುನಾವಣೆ ಸಂದರ್ಭದಲ್ಲಿ ಜನರೇ ನಿಮಗೆ ನಿದ್ದೆ ಮಾಡುವಂತೆ ಮಾಡುತ್ತಾರೆ’ ಎಂದು ಹೇಳಿದ್ದಾರೆ.
ಹೈಕಮಾಂಡ್ ದಿಗ್ವಿಜಯ್ ಸಿಂಗ್ ಅವರಿಂದ ಘಟನೆಗೆ ಸಂಬಂಧಿಸಿದಂತೆ ವರದಿ ಕೇಳಿದೆ. ಆದರೆ, ಈಗಾಗಲೇ ಮಾಧ್ಯಮದಲ್ಲಿ ಬಂದಿರುವುದರಿಂದ ಕಾಲಹರಣ ಮಾಡದೆ ತಕ್ಷಣ ರಾಜೀನಾಮೆ ಪಡೆದುಕೊಳ್ಳಲು ಸಿದ್ದರಾಮಯ್ಯಗೆ ಸೂಚನೆ ನೀಡಬೇಕೆಂದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರದ್ದಾಗಲೀ, ಹಿರಿಯ ಮುಖಂಡರಾದ ತಾರಾದೇವಿಯರ ಉಡುಪುಗಳನ್ನು ನೋಡಿದರೆ ಗೌರವ ಬರುತ್ತದೆ. ಅಂತಹ ಪಕ್ಷದಲ್ಲಿದ್ದುಕೊಂಡು ತನ್ವೀರ್ ಸೇಠ್ ಪಕ್ಷಕ್ಕೆ ಮುಜುಗರವಾಗುವಂತೆ ವರ್ತಿಸಿದ್ದಾರೆ. ನಿಮ್ಮ ಧರ್ಮದಲ್ಲಿ ಮಹಿಳೆಯರಿಗೆ ಬುರ್ಖಾ ಹಾಕಿಸುತ್ತಿರುವುದು ಯಾಕೆಂದು ನಿಮ್ಗೆ ಗೊತ್ತಿಲ್ಲವೇ ಎಂದು ತನ್ವೀರ್ ಸೇಠ್‌ರನ್ನು ಕೆಣಕಿದ್ದಾರೆ.
ತನ್ವೀರ್ ಸೇಠ್ ನಿಮ್ಗೆ ಪಕ್ಷದ ಮೇಲೆ ಗೌರವವಿದ್ದರೆ ತಕ್ಷಣ ರಾಜೀನಾಮೆ ನೀಡಿ ಸಚಿವ ಸಂಪುಟದಿಂದ ಹೊರಗೆ ಬನ್ನಿ. ಆಗ ನಿಮ್ಮ ಮೇಲಿನ ಗೌರವ ಹೆಚ್ಚುತ್ತದೆ. ಉಡಾಫೆ, ನಿರ್ಲಕ್ಷ್ಯ ತೋರಿದರೆ ಜನರೇ ನಿಮಗೆ ಸರಿಯಾದ ಬುದ್ಧಿ ಕಲಿಸುತ್ತಾರೆ ಎಂದರು.
500 ಹಾಗೂ 1000 ನೋಟ್‌ಗಳನ್ನು ಚಲಾವಣೆ ರದ್ದು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಉದಾತ್ತವಾದ ಉದ್ದೇಶವನ್ನು ಪೂಜಾರಿ ಸ್ವಾಗತಿಸಿದ್ದಾರೆ. ಆದರೆ, ಹೊಸ ನೋಟುಗಳ ಮುದ್ರಣ ಹಾಗೂ ವಿತರಣೆಯಲ್ಲಿ ಆಗುತ್ತಿರುವ ಅವ್ಯವಸ್ಥೆಯಲ್ಲಿ ಇವರ ಆಡಳಿತದ ಅನುಭವ ಎದ್ದುಕಾಣುತ್ತದೆ ಎಂದರು.
ತಾವು ಅರ್ಥ ಸಚಿವರಾಗಿದ್ದಾಗ ಕೇವಲ ಪಶ್ಚಿಮ ಬಂಗಾಳದಲ್ಲಿ ಮಾತ್ರವೇ ಮಾಡಬೇಕೆಂದ ಕರೆನ್ಸಿ ಮುದ್ರಣ ಕಚೇರಿಯಿಂದ ಇದರ ರಕ್ಷಣೆ, ಸಾಗಾಟ ಸಂದರ್ಭದಲ್ಲಿ ನೀಡಬೇಕಾದ ವಿಶೇಷ ಭದ್ರತೆಗೆ ಧಕ್ಕೆಯಾಗುವ ನಿಟ್ಟಿನಲ್ಲಿ ಮೈಸೂರಿನಲ್ಲೂ ಮುದ್ರಣ ಕಚೇರಿಯನ್ನು ತೆರೆಯಲಾಯಿತು ಎಂದು ನೆನಪಿಸಿಕೊಂಡರು.
ಈಗ ಗರಿಷ್ಠ ಮುಖಬೆಲೆಯ ನೋಟ್‌ಗಳನ್ನು ರದ್ದು ಮಾಡಿದಂತೆ ಹೊಸ ನೋಟ್‌ಗಳು ಬ್ಯಾಂಕ್ ಹಾಗೂ ಇನ್ನಿತರ ಕಡೆಗಳಿಗೆ ವಿತರಣೆಯಾಗುತ್ತಿದ್ದರೆ ಜನ ಪರದಾಡಬೇಕಾದ ಪ್ರಮೇಯ ಬರುತ್ತಿರಲಿಲ್ಲ ಎಂದರು.
ಡೊನಾಲ್ಡ್ ಟ್ರಂಪ್ ಗೆಲುವು ದೇಶದ ದುರಂತ. ಆತ ಎಂದೂ ಭಾರತದ ಪರವಾಗಿಲ್ಲ. ಪಾಕಿಸ್ತಾನದ ಪರವಾಗಿದ್ದಾನೆ ಎಂದು ಟ್ರಂಪ್ ಗೆಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English