‘ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಬಹುಮುಖ್ಯವಾದುದು’

10:16 AM, Monday, November 14th, 2016
Share
1 Star2 Stars3 Stars4 Stars5 Stars
(No Ratings Yet)
Loading...

Yakshaganaಪೆರ್ಲ: ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತವಾಗಿಸುವಲ್ಲಿ ಯಕ್ಷ್ಷಗಾನದ ಕೊಡುಗೆ ಬಹಳಷ್ಟಿದೆ. ಇಂದಿಗೂ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಯಕ್ಷಗಾನದಷ್ಟು ಸಮರ್ಥವಾಗಿ ದುಡಿಸಿಕೊಳ್ಳುವ ಕಲೆ ಮತ್ತೊಂದಿಲ್ಲ ಎಂದು ವಿಶ್ರಾಂತ ಪ್ರಾಧ್ಯಾಪಕ, ಚಿಂತಕ ಪಕಳಕುಂಜ ಶ್ಯಾಮ ಭಟ್ ಅಭಿಪ್ರಾಪಟ್ಟಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ, ಅಪೂರ್ವ ಕಲಾವಿದರು ಸಂಸ್ಥೆಯ ಸಹಕಾರದೊಂದಿಗೆ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ಸಭಾಂಗಣದಲ್ಲಿ ಶನಿವಾರ ನಡೆದ ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ’ಭಾಷೆ ಮತ್ತು ಯಕ್ಷಗಾನ’ ಎಂಬ ವಿಷಯದಲ್ಲಿ ಅವರು ವಿಶೇಷೋಪನ್ಯಾಸ ನೀಡಿ ಮಾತನಾಡಿದರು.

ಭಾಷೆ ಗಟ್ಟಿಗೊಳ್ಳುವಲ್ಲಿ ಕಲಾತ್ಮಕವಾಗಿ ಬಳಸಿಕೊಳ್ಳುವುದು ಮುಖ್ಯವಾಗುತ್ತದೆ.ಅಧ್ಯಯನ,ಕಲಿಕೆಯ ತುಡಿತಗಳು ಹೆಚ್ಚಿದಷ್ಟು ಭಾಷೆಯ ಬಗೆಗಿನ ಸ್ವರೂಪ ವರ್ಧಿಸಿ,ಬಳಕೆಯ ಚಿಂತನೆಗಳು ಒಡಮೂಡುತ್ತವೆಯೆಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್.ಭಟ್ ಕಾಸರಗೋಡಿನಲ್ಲಿ ನಿರಂತರ ನಡೆಯುತ್ತಿರುವ ಕನ್ನಡ ಕಾರ್ಯಕ್ರಮಗಳಿಂದ ಇಲ್ಲಿ ಕನ್ನಡ ಜೀವಂತವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಬ್ಯಾರಿ ಅಕಾಡೆಮಿ ಸದಸ್ಯೆ ಆಯಿಷಾ ಎ.ಎ ಪೆರ್ಲ ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕೆಲಸ ಕಾರ್ಯಗಳಲ್ಲಿ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯಎಂದರು. ಶ್ರೀಕೃಷ್ಣ ವಿಶ್ವಾಮಿತ್ರ, ಹರೀಶ್ ಪೆರ್ಲ, ಮಹಾಲಿಂಗೇಶ್ವರ ಎನ್, ಅಕ್ಷತಾ ರಾಜ್ ಪೆರ್ಲ ಶುಭನುಡಿಗಳನ್ನಾಡಿದರು.

ಕನ್ನಡ ಚಿಂತನೆ ಕಾರ್ಯಕ್ರಮ ಸಂಯೋಜಕ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಪೂರ್ವ ಕಲಾವಿದರು ಸದಸ್ಯ ಉದಯ ಸಾರಂಗ್ ಸ್ವಾಗತಿಸಿ, ಅಧ್ಯಕ್ಷ,Pರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ ಎಂ. ಸಾಲಿಯಾನ್ ವಂದಿಸಿದರು. ಡಾ.ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸಿದರು. ಸರೋಜ ಕುಮಾರಿ ಪ್ರಾರ್ಥನೆ ಹಾಡಿದರು.

ಸಭಾ ಕಾರ್ಯಕ್ರಮದ ಬಳಿಕ ಶೇಣಿ ವೇಣುಗೋಪಾಲ ಭಟ್ ಬಳಗದವರಿಂದ ’ಹೆಬ್ಬೆರಳು’ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳನದಲ್ಲಿ ಭಾಗವತರಾಗಿ ಸತೀಶ ಪುಣಿಂಚತ್ತಾಯ ಪೆರ್ಲ, ಅವಿನಾಶ್ ಶಾಸ್ತ್ರಿ ಕೊಲ್ಲೆಂಕಾನ, ಯೋಗೀಶ್ ಕಡಂಬಳಿತ್ತಾಯ ಭಾಗವಹಿಸಿದರು. ಮುಮ್ಮೇಳದಲ್ಲಿ ಪಕಳಕುಂಜ ಶ್ಯಾಮ ಭಟ್, ಶೇಣಿ ವೇಣುಗೋಪಾಲ ಭಟ್, ಸರವು ಸದಾಶಿವ ಭಟ್ ಪಾಲ್ಗೊಂಡರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English