ಮಂಗಳೂರಿನಲ್ಲಿ ಶ್ರೀರಾಮ ಸೇನೆಯ ದಶಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ‘ಸಂತ ಯಾತ್ರೆ’

3:09 PM, Friday, November 18th, 2016
Share
1 Star2 Stars3 Stars4 Stars5 Stars
(No Ratings Yet)
Loading...

Santha Yathraಮಂಗಳೂರು: ಚಿಕ್ಕಮಗಳೂರಿನ ದತ್ತಪೀಠ ಉತ್ಸವದ ಪೂರ್ವಭಾವಿಯಾಗಿ ಹಾಗೂ ಶ್ರೀರಾಮ ಸೇನೆಯ ದಶಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ‘ಸಂತ ಯಾತ್ರೆ’ ಮಂಗಳೂರಿನಾದ್ಯಂತ ನಿನ್ನೆ ನಡೆಯಿತು.

ಸಂತ ಯಾತ್ರೆಯು ಕದ್ರಿ ಮಂಜುನಾಥ ಕ್ಷೇತ್ರದಿಂದ ಹೊರಟು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸಮಾಪನಗೊಂಡಿತು. ಯಾತ್ರೆಯಲ್ಲಿ ಉತ್ತರ ಭಾರತದ ದಿಗಂಬರ ಅಖಾಡಾ, ಜುನಾ ಅಖಾಡಾ, ವೈಷ್ಣವ ದಿಗಂಬರ ಅಖಾಡಾಗಳಿಂದ ಸುಮಾರು 60ಕ್ಕೂ ಹೆಚ್ಚು ಸಾಧು ಸಂತರು ಭಾಗವಹಿಸಿದ್ದರು. ಯಾತ್ರೆಯಲ್ಲಿ ಶ್ರೀದತ್ತಾತ್ರೇಯರ ರಥದೊಂದಿಗೆ ಆಕರ್ಷಕ ಟ್ಯಾಬ್ಲೋದಲ್ಲಿ ಸಂತರು ಸಾಗಿದರು. ಈ ಸಂದರ್ಭದಲ್ಲಿ ನಡೆದ ಬೈಕ್ ಜಾಥಾಗೆ ಆರ್ಯ ಸಮಾಜ ಅಧ್ಯಕ್ಷ ದಿನಕರ ಶೆಟ್ಟಿ ಚಾಲನೆ ನೀಡಿದರು.

ಸಂತರು ಶೃಂಗೇರಿ, ಅಲ್ದೂರು, ಬಾಳೆಹೊನ್ನೂರಿನ ಶ್ರೀರಾಮ ಸೇನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಚಿಕ್ಕಮಗಳೂರಿನಲ್ಲಿ ಪುರಪ್ರವೇಶ ಮಾಡಲಿದ್ದಾರೆ. 20 ರಂದು ಅಲ್ಲಿ ಶೋಭಾಯಾತ್ರೆ ನಡೆಸಿ ದತ್ತಪೀಠದ ಪಾದುಕೆಗಳ ದರ್ಶನ ಪಡೆಯಲಿದ್ದಾರೆ. ಈ ಬಾರಿ ಮಂಗಳೂರು ವಿಭಾಗದಿಂದ 1,500ಕ್ಕೂ ಅಧಿಕ ಶ್ರೀರಾಮ ಸೇನೆ ಕಾರ್ಯಕರ್ತರು ದತ್ತಮಾಲಾಧಾರಿಗಳಾಗಿ ದತ್ತಪೀಠಕ್ಕೆ ತೆರಳಲಿದ್ದಾರೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್ ತಿಳಿಸಿದರು.

ಬಾಬಾ ಬಾಲಕನಾಥ್‌ಜಿ ಉಜ್ಜೈನಿ, ಆನಂದಗಿರಿನಾಥ್ ಜಿ ರಾಜಸ್ತಾನ್, ಜಿಲ್ಲಾಧ್ಯಕ್ಷ ಜೀವನ್ ಕುಮಾರ್ ನೀರುಮಾರ್ಗ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಮೊದಲಾದವರು ಹಾಜರಿದ್ದರು.

Santha Yathra

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English