ಚಾಕಲೇಟ್ ಆಮಿಷವೊಡ್ಡಿ ಮಕ್ಕಳ ಅಪಹರಣಕ್ಕೆ ಯತ್ನ: ತಪ್ಪಿಸಿಕೊಂಡ ಬಾಲಕ

4:03 PM, Wednesday, November 23rd, 2016
Share
1 Star2 Stars3 Stars4 Stars5 Stars
(No Ratings Yet)
Loading...

child-kidnapingಮಂಗಳೂರು: 2 ದಿನಗಳ ಹಿಂದೆಯಷ್ಟೇ ಕಲಬುರಗಿಯನ್ನು ಬೆಚ್ಚಿ ಬೀಳಿಸುವ ರೀತಿ ಕಿಡ್ನಾಪ್‌ ಪ್ರಕರಣವೊಂದು ನಡೆದಿತ್ತು. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ಒಂದು ವಾರದಿಂದ ಮಕ್ಕಳ ಅಪಹರಣಕಾರರ ಜಾಲವೊಂದು ಕರಾವಳಿ ಜಿಲ್ಲೆಯಾದ್ಯಂತ ಸುತ್ತಾಡುತ್ತಿದೆ ಎಂಬ ವಾಟ್ಸ್ಅಪ್ ಸಂದೇಶ ಜನರಲ್ಲಿ ಆತಂಕ ಮೂಡಿಸಿದ ಬೆನ್ನಲ್ಲೇ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಾಲಕನೊಬ್ಬ ಅಪಹರಣಕಾರರಿಂದ ತಪ್ಪಿಸಿಕೊಂಡು ಪಾರಾದ ಘಟನೆ ನಡೆದಿದೆ.

ಕರಿಯಂಗಳ ಗ್ರಾಮದ ಸಾಣೂರು ನಿವಾಸಿ ವಾಮನ ಎಂಬುವರ ಮಗ ನಿಖಿಲ್ (12) ಕಲ್ಲಡ್ಕ ಶ್ರೀರಾಮ ಶಾಲೆಯ ಏಳನೆ ತರಗತಿ ವಿದ್ಯಾರ್ಥಿ. ಶಾಲಾ ಬಸ್ ಹಿಡಿಯಲು ಮನೆಯಿಂದ ನಡೆದುಕೊಂಡು ಹೋಗುವ ವೇಳೆ ಕಪ್ಪು ಬಣ್ಣದ ಓಮ್ನಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು (ಅವರಲ್ಲಿ ಮೂವರು ಮಂಕಿ ಕ್ಯಾಪ್ ಧರಿಸಿದ್ದರು) ನಿಖಿಲ್‌ನನ್ನು ದಾರಿ ಮಧ್ಯೆ ತಡೆದಿದ್ದಾರೆ ಎನ್ನಲಾಗಿದೆ. ಆತ ಹೆದರಿದಾಗ ಚಾಕಲೇಟ್ ನೀಡುವುದಾಗಿ ಆಮಿಷವೊಡ್ಡಿದ್ದಾರೆ.

ಆದರೆ, ಇವರ ಆಮಿಷಕ್ಕೊಳಗಾಗದ ನಿಖಿಲ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ರಸ್ತೆ ಮೇಲೆ ಹೋದರೆ ಅವರು ಬೆನ್ನಟ್ಟುತ್ತಾರೆಂದು ತಿಳಿದು ಕಾಲುದಾರಿಯಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ. ಹೆದರಿ ನಡುಗುತ್ತಿದ್ದ ನಿಖಿಲ್‌ನನ್ನು ಮನೆಯವರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English