ಹಣ ಕೊಟ್ಟು ಪ್ರತಿಭಟನಾಕಾರರನ್ನು ಕರೆ ತಂದು ಮೋದಿ ವಿರುದ್ಧ ಪ್ರತಿಭಟನೆ: ಕಾಂಗ್ರೆಸ್ ಗೆ ಮಖಭಂಗ

4:45 PM, Thursday, November 24th, 2016
Share
1 Star2 Stars3 Stars4 Stars5 Stars
(No Ratings Yet)
Loading...

Modiಬೆಳಗಾವಿ: 500, 1000 ರೂಪಾಯಿ ನೋಟು ನಿಷೇಧಿಸಿದ ಪ್ರಧಾನಿ ನರೇಂದ್ರ ಮೋದಿ ನಿರ್ಧಾರದ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಹಣ ಕೊಟ್ಟು ಪ್ರತಿಭಟನಾಕಾರರನ್ನು ಕರೆ ತಂದು ಮೋದಿ ವಿರುದ್ಧ ಪ್ರತಿಭಟನೆ ನಡೆಸಿ ಮಖಭಂಗಕ್ಕೀಡಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ ಎಂದು ಖಾಸಗಿ ಟಿವಿ ಚಾನೆಲ್ ವೊಂದರ ವರದಿ ತಿಳಿಸಿದೆ.

ರೇಷನ್ ಕಾರ್ಡ್ ಕೊಡಿಸುವುದಾಗಿ ನಂಬಿಸಿ ಕಾಂಗ್ರೆಸ್ ಪಕ್ಷದವರು ಜನರನ್ನು ಕರೆತಂದಿದ್ದರು. ಆದರೆ ಸ್ಥಳಕ್ಕೆ ಬಂದಾಗ ನೋಟು ನಿಷೇಧಿಸಿದ್ದ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದಾಗ…ಜನರು ಗರಂ ಆದ ಘಟನೆ ನಡೆದಿದೆ.

ಅಲ್ರೀ ನಾವ್ ಯಾಕ್ರೀ ಮೋದಿ ವಿರುದ್ಧ ಪ್ರತಿಭಟನೆ ಮಾಡ್ಬೇಕು? ನೋಟು ನಿಷೇಧಿಸಿ ಒಳ್ಳೇ ಕೆಲ್ಸ ಮಾಡ್ಯಾರ….ಎಂದು ತಿರುಗಿಬೀಳುವ ಮೂಲಕ ಕಾಂಗ್ರೆಸ್ ನಿಜಬಣ್ಣ ಬಯಲಾಗಿದೆ ಎಂದು ವರದಿ ವಿವರಿಸಿದೆ.

ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್…ನನಗೇನು ಗೊತ್ತಿಲ್ಲ. ಇದಕ್ಕೂ ನನಗೆ ಸಂಬಂಧ ಇಲ್ಲ ಎಂದು ಹೇಳಿ, ಜನರ ಆಕ್ರೋಶಕ್ಕೆ ಹೆದರಿ ತೆರಳಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English