ಮಂಗಳೂರು: ಸಮಾಜದ್ರೋಹಿ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವುದಲ್ಲ, ಎದುರಿಸುವುದೂ ಅಲ್ಲ ಬದಲಾಗಿ ರಣರಂಗದಲ್ಲಿ ಸದೆಬಡಿಯುವ ಕಾರ್ಯ ಪ್ರತಿ ಗ್ರಾಮಗಳಲ್ಲಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದರು.
ಹಿಂದೂ ಜಾಗರಣ ವೇದಿಕೆಯ ಶಕ್ತಿನಗರ ವಲಯ ಮತ್ತು ಕಣ್ಣೂರು ನಗರ ಘಟಕಗಳ ಉದ್ಘಾಟನಾ ಪ್ರಯುಕ್ತ ಶಕ್ತಿನಗರದ ಕೇಂದ್ರ ಮೈದಾನದಲ್ಲಿ ಭಾನುವಾರ ಜರುಗಿದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಹೋರಾಟ, ಸಂಘಟನೆ ಸಮಾವೇಶ ಎಂದರೆ ಸಮಸ್ಯೆಗಳ ವೈಭವೀಕರಣ ಬಿಟ್ಟು ಉತ್ತರ ಕಂಡುಕೊಳ್ಳುವಂತಾಗಬೇಕು. ಸಾಮಾಜಿಕ ಪಿಡುಗುಗಳಿಗೆ ಪರಿಹಾರ ಕಂಡುಕೊಳ್ಳುವ ಸಂಶೋಧನೆಗಳಾಗಬೇಕು. ಈ ನಿಟ್ಟಿನಲ್ಲಿ ಹಿಂದೂ ಸಂಘಟನೆಗಳು ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ದುಃಖಿಸುವ ಹಿಂದೂ ಇಂದು ರೊಚ್ಚಿಗೆ ಏಳುವ ಸ್ಥಿತಿಗೆ ತಲುಪಿದ್ದಾನೆ. ಮೈಕೊಡವಿ ಸೂಕ್ತ ಪಾಠದ ಎಚ್ಚರಿಕೆಗೆ ಮುಂದಾಗಿದ್ದಾನೆ. ದೇಶ, ಧರ್ಮ ಮತ್ತು ಸಮಾಜಘಾತುಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾನೆ. ಇದಕ್ಕೆ ಆರ್‌ಎಸ್‌ಎಸ್, ವಿಹೆಚ್‍ಪಿ, ಭಜರಂಗದಳಗಳಂತಹ ಸಂಘಟನೆಗಳ ಶಕ್ತಿ ಇದೆ ಎಂದು ಅಭಿಪ್ರಾಯಪಟ್ಟರು.
ತೆರೆಯ ಮರೆಯಲ್ಲಿ ಹೊಂಚುಹಾಕಿ ಕೊಲೆ, ಸ್ಫೋಟ ನಡೆಸುವ ದುಷ್ಟಶಕ್ತಿಗಳದ್ದು ಯಾವ ತಾಕತ್ತು ಎಂದು ಪ್ರಶ್ನಿಸಿದ ಅವರು, ಹತ್ತಾರು ಹಿಂದೂ ಯುವಕರನ್ನು ಹತ್ಯೆಮಾಡಿರಬಹದು. ಆದರೆ ಇನ್ಮುಂದೆ ಇಂತಹ ಕೃತ್ಯಗಳು ನಡೆಯಲಾರದು. ಹಿಂದೂ ಸಂಘಟನೆಗಳ ಕಾರ್ಯತಂತ್ರವೂ ಬದಲಾಗಿದೆ. ಇನ್ನು ಹಿಂದೂಗಳು ಅಳುವುದು ಸಾಧ್ಯವಿಲ್ಲ ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆ ನೀಡಿದರು.
ಧರ್ಮ ಮತ್ತು ದೇಶಕ್ಕಾಗಿ ಹೋರಾಟ ಹಾಗೂ ಸಮಾಜಕ್ಕಾಗಿ ಸಮರ್ಪಣೆ ಕಾರ್ಯ ಪ್ರತಿ ಗ್ರಾಮಗಳಲ್ಲಿನ ಹಿಂದೂ ಸಂಘಟನೆಗಳ ಯುವಕರ ಗುರಿಯಾಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್, ಉದ್ಯಮಿ ಕೆ.ಸಿ. ನಾಯಿಕ, ಹಿತರಕ್ಷಣಾ ಸಮಿತಿ ಅಧ್ಯಕ್ಷ ಹೆಚ್.ಕೆ. ಪುರುಷೋತ್ತಮ ಸೇರಿದಂತೆ ಮತ್ತಿತರರು.
Click this button or press Ctrl+G to toggle between Kannada and English