ಬೆಂಗಳೂರು: ಜಮ್ಮು ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಪಾರ್ಥಿವ ಶರೀರ ಗುರುವಾರ ಬೆಳಗ್ಗೆ ಬೆಂಗಳೂರಿಗೆ ತಲುಪಿದೆ.
ಅಕ್ಷಯ್ ಪಾರ್ಥಿವ ಶರೀರ ಯಲಹಂಕದ ವಾಯುನೆಲೆಗೆ ತರಲಾಗಿದ್ದು, 12.30ಕ್ಕೆ ಯಲಹಂಕದ ನಿವಾಸಕ್ಕೆ ಪಾರ್ಥಿವ ಶರೀರ ತರಲಾಗುವುದು ಎಂದು ಮೂಲಗಳು ತಿಳಿಸಿವೆ.
ಯಲಹಂಕದ ವಾಯುನೆಲೆಯಲ್ಲಿ ಮೇಜರ್ ಅಕ್ಷಯ್ ಕುಮಾರ್ ಗೆ ವಾಯುಸೇನೆ ಅಂತಿಮ ಗೌರವ ಸಲ್ಲಿಸಿತು. ಮಧ್ಯಾಹ್ನ 2ಗಂಟೆಯಿಂದ 4ಗಂಟೆವರೆಗೆ ಹುತಾತ್ಮ ಅಕ್ಷಯ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.
Click this button or press Ctrl+G to toggle between Kannada and English