ಮಂಗಳೂರು: ಮುಂಬಯಿಯಲ್ಲಿ ಆ. 6 ಮತ್ತು 7ರಂದು ನಡೆಯಲಿರುವ ಕನ್ನಡ ಸಂಸ್ಕೃತಿ ಸಮ್ಮೇಳನದ ಪತ್ರಿಕಾಗೋಷ್ಠಿ ಮಂಗಳವಾರ ಪತ್ರಿಕಾಭಾವನದಲ್ಲಿ ನಡೆಯಿತು. ಮುಂಬಯಿಯ ಬಿಲ್ಲವ ಭವನ ಸಾಂತಾಕ್ರೂಸ್‌ನಲ್ಲಿ 8ನೇ ಅಖಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಕನ್ನಡ ಸಂಘ ಮತ್ತು ಹೃದಯ ವಾಹಿನಿ ಪತ್ರಿಕೆ ಆಯೋಜಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ. ಮಂಜುನಾಥ ಸಾಗರ್ ಸಮ್ಮೇಳನದ ಬಗ್ಗೆ ವಿವರಿಸಿದರು. ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ಹೊರನಾಡು ಕನ್ನಡಿಗರ ಗೋಷ್ಠಿ, ಹಾಸ್ಯಗೋಷ್ಠಿ, ಕವಿಗೋಷ್ಠಿ, ಮಾಧ್ಯಮ ಗೋಷ್ಠಿ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಈ ಸಂದರ್ಭದದಲ್ಲಿ ಮಾತನಾಡಿದ ಬಹ್ರೈನ್ ಕನ್ನಡ ಸಂಘದ ಅಧ್ಯಕ್ಷ ರಾಜ್ ಕುಮಾರ್ 8ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸೆ. 29 ಮತ್ತು 30ರಂದು ಬಹ್ರೈನ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ವಿಶ್ವ ಮಟ್ಟದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಕಲೆ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವುದು ಈ ಸಮ್ಮೇಳನದ ಮುಖ್ಯ ಉದ್ದೇಶ. ಅನಿವಾಸಿ ಕನ್ನಡಿಗರ ಮಕ್ಕಳಿಗೆ ಕನ್ನಡದ ಬಾಂಧವ್ಯ ಮೂಡಿಸುವುದು ಮತ್ತು ತಾವಿರುವ ದೇಶದ ಕಲಾವಿದರೊಂದಿಗೆ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ| ಕೆ.ಬಿ. ನಾಗೂರ್, ರಮೇಶ್ ಮಂಜೇಶ್ವರ ಮುಂತಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English