ದಾಖಲೆ ರಹಿತವಾಗಿ ಹಣ ಸಾಗಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳ ವಶ

12:48 PM, Thursday, December 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

transporting-unaccountedಪುತ್ತೂರು: ದಾಖಲೆ ರಹಿತವಾಗಿ ಹಣ ಸಾಗಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳ ಸಹಿತ 18.8 ಲಕ್ಷ ರೂಪಾಯಿಯನ್ನು ಪುತ್ತೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪುತ್ತೂರು ಮೂಲಕವಾಗಿ ದಾಖಲೆ ರಹಿತವಾಗಿ ಹಣ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಲ್ಲಡ್ಕದಿಂದ ಪುತ್ತೂರಿಗೆ ಆಗಮಿಸಿದ ಕಾರನ್ನು ಮುಕ್ರಂಪಾಡಿಯಲ್ಲಿ ತಡೆದ ಪೊಲೀಸರು, ಒಟ್ಟು 18.8 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 100 ರೂಪಾಯಿ ಮುಖಬೆಲೆಯ 1,90,700 ರೂಪಾಯಿ ಹಾಗೂ 2000 ರೂಪಾಯಿ ಮುಖಬೆಲೆಯ 16,80,000 ರೂಪಾಯಿ ಮತ್ತು 50 ರೂಪಾಯಿ ಮುಖಬೆಲೆಯ 9,300 ರೂಪಾಯಿ ಸೇರಿ ಒಟ್ಟು 18,80,000 ರೂಪಾಯಿ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಕಲ್ಲಡ್ಕ ಗೋಳ್ತಮಜಲು ಗ್ರಾಮದ ಇಬ್ರಾಹಿಂ ಎಂಬವರ ಪುತ್ರ ಜಾಫರ್ ಶರೀಫ್(28) , ಕಲ್ಲಡ್ಕ ಗೋಳ್ತಮಜಲು ಗ್ರಾಮದ ಅಬೂಬಕರ್ ಎಂಬವರ ಪುತ್ರ ನಝೀರ್(25) ಹಾಗೂ ಕಲ್ಲಡ್ಕ ಗೋಳ್ತಮಜಲು ಗ್ರಾಮದ ಅಬ್ದುಲ್ ರಹಿಮಾನ್ ಪುತ್ರ ಮಹಮ್ಮದ್ ಇಕ್ಬಾಲ್(26) ಎಂಬುವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಎಸ್ಪಿ ಭೀಷಣ್ ಗುಲಾಬ್ ರಾವ್ ಬೋರಸೆ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವೇದಮೂರ್ತಿ ಮಾರ್ಗದರ್ಶನದಂತೆ ಪುತ್ತೂರು ಎಎಸ್‌‌ಪಿ ರಿಶ್ಯತ್ ಆದೇಶದಂತೆ ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಗ್ರಾಮಾಂತರ ಠಾಣೆಯ ಎಸ್‌‌ಐ ಅಬ್ದುಲ್ ಖಾದರ್ ಹಾಗೂ ಸಿಬಂದಿಗಳಾದ ಚಂದ್ರ ಎಚ್., ವಿನಯಕುಮಾರ್, ರವೂಫ್ ಮತ್ತು ನಗರ ಠಾಣೆಯ ಸ್ಕರಿಯ, ಪ್ರಶಾಂತ್ ರೈ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English