ಜೀವ ನೀಡುವ ಶಕ್ತಿ ಹೇಗೆ ನಮಗಿಲ್ಲವೋ ಅದೇ ರೀತಿ ಜೀವ ತೆಗೆಯುವ ಅಧಿಕಾರವೂ ನಮಗಿಲ್ಲ: ರಮೇಶ್ ಕುಮಾರ್

11:00 AM, Saturday, December 10th, 2016
Share
1 Star2 Stars3 Stars4 Stars5 Stars
(No Ratings Yet)
Loading...

Wenlock Hospital ಮಂಗಳೂರು: ಜೀವ ನೀಡುವ ಶಕ್ತಿ ಹೇಗೆ ನಮಗಿಲ್ಲವೋ ಅದೇ ರೀತಿ ಜೀವ ತೆಗೆಯುವ ಅಧಿಕಾರವೂ ನಮಗಿಲ್ಲ. ಕೊಡುವುದು ಇಲ್ಲವಾದರೆ ಪಡೆಯುವುದು ಅಸಾಧ್ಯ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು.

ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ವೈದ್ಯರು, ದಾದಿಗಳ ಅಸಡ್ಡೆ, ಅಪ್ರಾಮಾಣಿಕತೆಯ ಸೇವೆಯಿಂದ ಜೀವ ಹೋದರೆ ಕೊಲೆಗಡುಕರಾಗುತ್ತಾರೆ. ರೋಗಿಗಳ ಜೀವ ನಿಮ್ಮ ಕೈಯಲ್ಲಿದೆ.

ರೋಗಿಯ ಕುಟುಂಬ ನಿಮ್ಮ ಮೇಲೆ ನಂಬಿಕೆಯಿಟ್ಟಿರುತ್ತದೆ. ಶಕ್ತಿ ಮೀರಿ ಪ್ರಾಣ ಉಳಿಸುವ ಕಾರ್ಯ ನಿಮ್ಮದು. ಇದು ಸಂಪಾದನೆಗಾಗಿ ಆಸೆ ಪಡುವ ಕ್ಷೇತ್ರವಲ್ಲ. ಲಾಭ ಗಳಿಕೆಯ ಕ್ಷೇತ್ರವೂ ಆಗಕೂಡದು. ಹೀಗಾಗಿ ನಿಮ್ಮಲ್ಲಿ ವೈರಾಗ್ಯ ಮನೋಭಾವ ಇರಬೇಕು. ಆಗ ಜನರೂ ನಿಮ್ಮ ಮೇಲೆ ಗೌರವವಿಡುತ್ತಾರೆ ಎಂದು ಕಿವಿಮಾತು ಹೇಳಿದರು.

Wenlock Hospitalರೋಗಿಗಳಿಗೆ ನಗು ನಗುತ್ತಾ, ತಾಳ್ಮೆಯಿಂದ ಸೇವೆ ಮಾಡಿ. ಇದರಿಂದ ಆಸ್ಪತ್ರೆಗೆ ಕಾಲಿಟ್ಟಾಗಲೇ ಅರ್ಧ ರೋಗ ವಾಸಿಯಾದಂತೆ. ತಾಳ್ಮೆ, ಸೂಕ್ಷ್ಮ ಪರಿಶೀಲನೆ, ಇನ್ನೊಬ್ಬರ ನೋವನ್ನು ಹೀರುವ ನಿಸ್ವಾರ್ಥ ಗುಣಗಳು ಪ್ರತಿಯೊಬ್ಬರಲ್ಲಿರಬೇಕು ಎಂದರು.

ಡಾಕ್ಟರ್ ಎಂದ ಮಾತ್ರಕ್ಕೆ ವೈದ್ಯರೆನಿಸಿಕೊಳ್ಳಲು ಸಾಧ್ಯವಿಲ್ಲ. ಎ ಗ್ರೂಪ್‌ನಿಂದ ಡಿ ಗ್ರೂಪ್‌‌‌‌ವರೆಗಿನ ಎಲ್ಲರೂ ಒಂದೇ ಕುಟುಂಬದ ಸದಸ್ಯರು. ಎಲ್ಲರೂ ಒಟ್ಟಾಗಿ ಸೇವೆಯಲ್ಲಿ ತೊಡಗಬೇಕು ಎಂದರು.

Wenlock Hospital

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English