ಎತ್ತಿನಹೊಳೆ ಯೋಜನೆಯನ್ನು ಕೈಬಿಡುವಂತೆ ಬಿಜೆಪಿಯವರು ವಿಧಾನಸಭೆ, ವಿಧಾನ ಪರಿಷತ್‌‌ನಲ್ಲಿ ನಿಲುವಳಿ ಮಂಡಿಸಲಿ: ರಮಾನಾಥ ರೈ

11:20 AM, Saturday, December 10th, 2016
Share
1 Star2 Stars3 Stars4 Stars5 Stars
(No Ratings Yet)
Loading...

ramanatha-raiಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ಕೈಬಿಡುವಂತೆ ಬಿಜೆಪಿಯವರು ವಿಧಾನಸಭೆ, ವಿಧಾನ ಪರಿಷತ್‌‌ನಲ್ಲಿ ನಿಲುವಳಿ ಮಂಡಿಸಲಿ. ಆ ಬಳಿಕವೂ ಯೋಜನೆ ಕೈಬಿಡಲು ಸಾಧ್ಯವಾಗದಿದ್ದಲ್ಲಿ ನಾನು ರಾಜಕೀಯದಿಂದಲೇ ಹೊರಬರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸವಾಲು ಹಾಕಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ವಿರುದ್ಧ ವಿಧಾನಸಭಾ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಕೈಬಿಡುವಂತೆ ನಿಲುವಳಿ ಮಂಡಿಸಲಿ. ಆ ಬಳಿಕ ಮುಖ್ಯಮಂತ್ರಿಯವರ ಕೈಕಾಲು ಹಿಡಿದಾದರೂ ಯೋಜನೆಯನ್ನು ನಿಲ್ಲಿಸುತ್ತೇನೆ. ಇಲ್ಲದಿದ್ದಲ್ಲಿ ರಾಜಕೀಯದಿಂದಲೇ ಹೊರಬರುತ್ತೇನೆ ಎಂದರು.

ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಆಯೋಜಿಸಿದ ಸಪ್ತ ಕ್ಷೇತ್ರ ಪಂಚತೀರ್ಥ ರಥಯಾತ್ರೆಯನ್ನು ಉಲ್ಲೇಖಿಸಿದ ಅವರು, ಈ ರಥಯಾತ್ರೆಯ ಹಿಂದಿರುವವರು ಸಂಘ ಪರಿವಾರದವರು. ರಾಜಕೀಯ ಉದ್ದೇಶದಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಸರಕಾರದ ಮೇಲೆ ಗೂಬೆ ಕೂರಿಸಲು ರಥಯಾತ್ರೆ ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯ ಪ್ರಭಾವಿ ಸಂಸದ ನಳಿನ್ ಕುಮಾರ್ ಕಟೀಲ್ ಸಾಧನೆ ಶೂನ್ಯ ಎಂದ ಅವರು, ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದುಕೊಂಡಿದ್ದೇವೆ. ಪ್ರಚಾರದಲ್ಲಿ ನಂಬರ್ ಒನ್. ಸಾಧನೆ ಏನೂ ಇಲ್ಲ. ತನ್ನ ವೈಫಲ್ಯವನ್ನು ಮರೆಮಾಚಲು ಈಗ ರಥಯಾತ್ರೆ ನಡೆಸುತ್ತಿದ್ದಾರೆ ಎಂದರು ಆರೋಪಿಸಿದರು.

ಪ್ರಸ್ತುತ ಹುಲಿ ಯೋಜನೆ ನಿಂತಿದ್ದರೆ ಅದು ತನ್ನಿಂದಾಗಿ. ಈ ಹಿಂದೆ ಯುಪಿಎ ಸರಕಾರ ಆಡಳಿತದಲ್ಲಿದ್ದಾಗ ಕಸ್ತೂರಿ ರಂಗನ್ ವರದಿ ಹಾಗೂ ಹುಲಿ ಯೋಜನೆ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು. ಈಗ ಯಾರೂ ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಬಿಜೆಪಿ ಎರಡು ನಾಲಗೆಯ ಹಾವಿದ್ದ ಹಾಗೆ ಎಂದರು. ಮಂಗಳೂರಿನಲ್ಲೊಂದು ಬೆಂಗಳೂರಿನಲ್ಲೊಂದು ಮಾತನಾಡುತ್ತಾರೆ ಎಂದರು.

ಈ ಯೋಜನೆ ಸಂಬಂಧಿಸಿ ತಾನು ತಪ್ಪು ಮಾಡಿಲ್ಲ. ತಪ್ಪು ಮಾಡಿದರೆ ದೇವರೂ ಕ್ಷಮಿಸುವುದಿಲ್ಲ. ಆದರೂ ಸುಮ್ಮನೆ ತನ್ನ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಈ ಯೋಜನೆಯನ್ನು ನಿಲ್ಲಿಸುವಷ್ಟು ದೊಡ್ಡ ವ್ಯಕ್ತಿ ತಾವಲ್ಲ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English