ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮದಂತಹ ಕ್ರಾಂತಿಕಾರಿ ಹೋರಾಟ ನಿಶ್ಚಿತ: ನಳಿನ್ ಕುಮಾರ್

4:28 PM, Monday, December 12th, 2016
Share
1 Star2 Stars3 Stars4 Stars5 Stars
(No Ratings Yet)
Loading...

Ratha-yathreಪುತ್ತೂರು: ಎತ್ತಿನಹೊಳೆ ಯೋಜನೆಯ ಬಗ್ಗೆ ದ.ಕ ಜಿಲ್ಲೆಯ ಜನರನ್ನು ಮಾತುಕತೆಗೆ ಕರೆಯದಿದ್ದರೆ, ಮುಂಬರುವ ದಿನಗಳಲ್ಲಿ ದ.ಕ. ಜಿಲ್ಲೆಯ ಪಾಲಿಗೆ ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮದಂತಹ ಕ್ರಾಂತಿಕಾರಿ ಹೋರಾಟ ನಿಶ್ಚಿತವೆಂದು ಸಂಸದ ನಳಿನ್ ಕುಮಾರ್ ಕಟೀಲ್ ಘೋಷಿಸಿದ್ದಾರೆ.

ಅವರು ಪಂಚ ತೀರ್ಥ – ಸಪ್ತ ಕ್ಷೇತ್ರ ರಥ ಯಾತ್ರೆಯು ನೇತ್ರಾವತಿ ಕುಮರಾಧಾರ ನದಿ ಸಂಗಮ ಸ್ಥಳದ ತೀರ್ಥ ಸಂಗ್ರಹಣೆಗಾಗಿ ಭಾನುವಾರ ಉಪ್ಪಿನಂಗಡಿಗೆ ಆಗಮಿಸಿದ ಹಿನ್ನೆಲೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಜನತೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಬಾರಿ ಕೃಷಿಕರು ನೇತ್ರಾವತಿ ನೀರನ್ನು ಬಳಕೆ ಮಾಡಬಾರದು ಎಂದೂ ಹೇಳಿದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿಗಳು ಸಭೆ ಕರೆದಿಲ್ಲ ಜನವರಿ 26 ರ ಒಳಗಾಗಿ ದ.ಕ. ಜಿಲ್ಲೆಯ ಜನರನ್ನು ಮಾತುಕತೆಗೆ ಕರೆಯದಿದ್ದರೆ, ಬಳಿಕ ದಿನದಲ್ಲಿ ದ.ಕ. ಜಿಲ್ಲೆಯ ಪಾಲಿಗೆ ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮದಂತಹ ಕ್ರಾಂತಿಕಾರಿ ಹೋರಾಟ ನಿಶ್ಚಿತವೆಂದು ಸಂಸದ ನಳಿನ್ ಕುಮಾರ್ ಕಟೀಲ್ ಘೋಷಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಕಾಂಗ್ರೆಸ್ ಮುಖಂಡ ದಿನಕರ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು ಮಾತನಾಡಿದರು. ಜಿಪಂ ಅಧ್ಯಕ್ಷೆ ನೀನಾಕ್ಷಿ ಶಾಂತಿಗೋಡು, ಅಲಿಮಾರ ರಘುನಾಥ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಯೋಗೀಶ್ ಭಟ್, ಎಂ.ಜಿ. ಹೆಗಡೆ, ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English