ಮಂಗಳೂರು: ಅಬಕಾರಿ ಸಚಿವ ಹೆಚ್.ವೈ.ಮೇಟಿ ವಿರುದ್ಧದ ರಾಸಲೀಲೆ ಆರೋಪದಿಂದ ಕಾಂಗ್ರೆಸ್ ಪಕ್ಷಕ್ಕೆ ಕಳಂಕವಾಗಿದೆ. ಸಿಎಂಗೆ ನೈತಿಕತೆ ಎಂಬುದು ಇದ್ದಲ್ಲಿ ತಕ್ಷಣ ಅವರಿಂದ ರಾಜೀನಾಮೆ ಪಡೆಯಬೇಕು. ರಾಜೀನಾಮೆ ನೀಡಲು ಒಪ್ಪದಿದ್ದಲ್ಲಿ ಪಕ್ಷದಿಂದಲೇ ಕಿತ್ತುಹಾಕಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಕಳಂಕ ತರುವವರನ್ನು ಪಕ್ಷದಿಂದ ಉಚ್ಛಾಟಿಸಲಿಕ್ಕಾಗದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿರಲು ಅನರ್ಹರು ಎಂದು ವ್ಯಂಗ್ಯವಾಡಿದ್ದಾರೆ.
ಅಧಿಕಾರಿ ಭೀಮಾನಾಯ್ಕ್ ಮೇಲೆ ಕ್ರಮ ಕೈಗೊಳ್ಳದ ಸಿಎಂ, ಈಗಾಗಲೇ ತಮ್ಮ ಜ್ಞಾನವನ್ನು ಅಡವಿಟ್ಟಿದ್ದಾರೆ ಎಂದ ಅವರು, ಮಂತ್ರಿಗಳ ಮೇಲೆ, ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ. ಯಾರಾದರೂ ಸಲಹೆ ಕೊಟ್ಟರೂ ಅದರಲ್ಲಿ ಸಿಎಂ ಸಿದ್ದರಾಮಯ್ಯ ಉಡಾಫೆ ಪ್ರದರ್ಶಿಸುತ್ತಿದ್ದಾರೆ. ಇಷ್ಟು ಬೇಜಾವಾಬ್ದಾರಿಯಿಂದ ವರ್ತಿಸುವುದಾದರೆ ನೀವು ಸಿಎಂ ಸ್ಥಾನದಿಂದ ಕೆಳಗಿಳಿಯಿರಿ. ಪರಮೇಶ್ವರ್ ಅವರನ್ನು ಸಿಎಂ ಮಾಡಲು ಹೈಕಮಾಂಡ್‌ಗೆ ಗೊತ್ತಿದೆ ಎಂದರು.
ನೇತ್ರಾವತಿ ಹಾಗೂ ಮಹಾದಾಯಿ ವಿಚಾರದಲ್ಲಿ ಇಡೀ ಕರ್ನಾಟಕ ಎದ್ದು ನಿಂತಿದೆ. ರಾಜ್ಯವನ್ನು ಮರುಭೂಮಿ ಮಾಡಲು ಸಿಎಂ ಹೊರಟಿದ್ದಾರೆ. ಈಗಾಗಲೇ ಎತ್ತಿನಹೊಳೆ ಯೋಜನೆಯಲ್ಲಿ ಈಗಾಗಲೇ ದೊಡ್ಡ ಪ್ರಮಾಣದ ಭ್ರಷ್ಟಾಚಾರವಾಗಿದೆ. ಇಷ್ಟಾದರೂ ಈ ಬಗ್ಗೆ ತನಿಖೆಯಾಗುವುದಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು.
Click this button or press Ctrl+G to toggle between Kannada and English