ಕೋಮುವಾದದ ವಿರುದ್ಧ ದ.ಕ. ಜಿಲ್ಲಾ ಸೌಹಾರ್ದ ಸಮಾವೇಶ

3:31 PM, Tuesday, December 13th, 2016
Share
1 Star2 Stars3 Stars4 Stars5 Stars
(No Ratings Yet)
Loading...

CPMಮಂಗಳೂರು: ಸೌಹಾರ್ದದ ನೆಲೆಯಾಗಿದ್ದ ಕರಾವಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೋಮುವಾದ ತಳವೂರಿದ್ದು, ಕಾಂಗ್ರೆಸ್ಸಿಗಾಗಲೀ, ಪ್ರಾದೇಶಿಕ ಪಕ್ಷಗಳಿಗಾಗಲೀ ಇಂತಹ ದಾಳಿಗಳನ್ನು ತಡೆಯುವ ಶಕ್ತಿಯಿಲ್ಲ. ಏಕೆಂದರೆ ಅವುಗಳು ಅಧಿಕಾರಕ್ಕಾಗಿ ಕೋಮುವಾದಿ ಶಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿವೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದ್ದಾರೆ.

ನಗರದ ಪುರಭವನದಲ್ಲಿ ಸಿಪಿಐ(ಎಂ) ದ.ಕ.ಜಿಲ್ಲಾ ಸಮಿತಿ ಏರ್ಪಡಿಸಿದ್ದ ಕೋಮುವಾದದ ವಿರುದ್ಧ ದ.ಕ. ಜಿಲ್ಲಾ ಸೌಹಾರ್ದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಬೌದ್ಧಿಕ ಕೇಂದ್ರಗಳಾದ ವಿಶ್ವವಿದ್ಯಾನಿಲಯಗಳನ್ನು ನಾಶಗೊಳಿಸುವ ಪ್ರಯತ್ನ ನಡೆಯುತ್ತಿದೆ. ದಲಿತರ ಮೇಲೆ ದಾಳಿಗಳು ಹೆಚ್ಚುತ್ತಿವೆ.

ಮನುಷ್ಯರ ಆಹಾರ ಹಕ್ಕಿನ ಮೇಲೆ ದಾಳಿ ನಡೆಯುತ್ತಿವೆ. ಯಾವ ಬಟ್ಟೆ ತೊಡಬೇಕು, ಯಾವ ಆಹಾರ ಉಣಬೇಕು, ಏನನ್ನು ಮಾತನಾಡಬೇಕು ಎಂದು ಕೋಮು ಶಕ್ತಿಗಳು ನಿರ್ದೇಶನ ನೀಡುತ್ತವೆ. ವ್ಯಕ್ತಿಯ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುವ ದಾಳಿಗಳು ನಮ್ಮ ಸಂವಿಧಾನದ ಮೇಲೆಯೇ ನಡೆಯುತ್ತಿರುವ ದಾಳಿಗಳಾಗಿವೆ ಎಂದರು.

CPMಸಿದ್ದರಾಮಯ್ಯನವರ ಕಾಂಗ್ರೆಸ್ಸ್ ಸರ್ಕಾರ ಕೋಮುವಾದಿ ಚಟುವಟಿಕೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಅಂತಹವರ ಚಟುವಟಿಕೆಗೆ ರಕ್ಷಣೆ ನೀಡಲಾಗುತ್ತಿದೆ. ಆದರೆ ರೈತರ, ಕೃಷಿ ಕಾರ್ಮಿಕರ ಅಖಿಲ ಭಾರತ ಜಾಥಾದ ಮೆರವಣಿಗೆಗೆ ಅವಕಾಶ ಕೊಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಕೋಮುವಾದದ ವಿರುದ್ಧ ಅಳುಕಿ ನಡೆಯುತ್ತಿದೆ ಎಂದು ಟೀಕಿಸಿದರು.

ಲೇಖಕಿ ಹಾಗೂ ನಿವೃತ್ತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಮಾತನಾಡಿ, ಧಾರ್ಮಿಕತೆಯ ಸೋಗು ಹಾಕಿ ವಾಣಿಜ್ಯ ವಹಿವಾಟು ನಡೆಸುವವರನ್ನು ಬಹಿರಂಗಗೊಳಿಸಬೇಕು. ಸಹೃದಯತೆಯುಳ್ಳ ಜನರನ್ನು ಒಗ್ಗೂಡಿಸಬೇಕು ಎಂಬುದಾಗಿ ಕರೆ ನೀಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English