ಬೆಂಗಳೂರು : ಬಿಜೆಪಿಯ ಹಿರಿಯ ನಾಯಕ ಡಿ.ವಿ. ಸದಾನಂದ ಗೌಡ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸೋತ ಅಭ್ಯರ್ಥಿ ಜಗದೀಶ್ ಶೆಟ್ಟರ್ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಬುಧವಾರ ಮಧ್ಯಾಹ್ನ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ರಹಸ್ಯ ಮತದಾನದ ಮೂಲಕ ಡಿವಿಎಸ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡರು. ಸದಾನಂದ ಗೌಡ ಆಯ್ಕೆ ಮೂಲಕ ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದಂತಾಗಿದೆ. ಯಡಿಯೂರಪ್ಪ ಸಹ ಮತ ಚಲಾಯಿಸಿದರು. ಸದಾನಂದ ಗೌಡ ಪರ 62 – ಜಗದೀಶ್ ಶೆಟ್ಟರ್ ಪರ 55 ಮತಗಳು ಚಲಾವಣೆಯಾಗಿದ್ದವು.
ಹೊಡೆದಾಟ ಪೈಪೋಟಿಗಳ ನಡುವೆ ಒಂದು ಹಂತದಲ್ಲಿ ಸಭೆ ವಿಕೋಪಕ್ಕೆ ತಿರುಗಿದ್ದನ್ನು ಸೂಕ್ಷ್ಮವಾಗಿ ಅವಲೋಕಿಸಿದ ಇಬ್ಬರೂ ವೀಕ್ಷಕರಾದ ಅರುಣ್ ಜೇಟ್ಲಿ ಮತ್ತು ರಾಜನಾಥ ಸಿಂಗ್ ಅವರು ಮುಖ್ಯಮಂತ್ರಿಗಾದಿಗಾಗಿ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ಹೆಸರುಗಳನ್ನು ಆಖೈರುಗೊಳಿಸಿ, ರಹಸ್ಯ ಮತದಾನಕ್ಕೆ ಆದೇಶಿಸಿದ್ದರು.
ಸಭೆಯಲ್ಲಿ ಒಟ್ಟು 117 ಶಾಸಕರು ಮತ ಚಲಾಯಿಸಿದರು. ಸಭೆಗೆ ಆಗಮಿಸಿದ್ದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಮತ್ತು ಆಂಗ್ಲೊ ಇಂಡಿಯನ್ ನಾಮಕರಣ ಸದಸ್ಯ ಡೆರಿಕ್ ಅವರಿಗೆ ಮತದಾನಕ್ಕೆ ಅವಕಾಶ ನಿರಾಕರಿಸಲಾಯಿತು. ಅದಕ್ಕೂ ಮುನ್ನ ಸಭೆಗೆ ಬಂದಿದ್ದ ಸಂಸದರು ಮತ್ತು ಮೇಲ್ಮನೆ ಸದಸ್ಯರನ್ನು ಮತದಾನ ಸ್ಥಳದಿಂದ ಹೊರ ಕಳಿಸಿ, ಬ್ಯಾಲೆಟ್ ಪೇಪರ್ ಮೂಲಕ ಗುಪ್ತ ಮತದಾನಕ್ಕೆ ಅನುವು ಮಾಡಿ ಕೊಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮಂಡೆಕೋಲಿನ ದೇವರಗುಂಡ ವೆಂಕಪ್ಪ ಸದಾನಂದ ಗೌಡ ಆಯ್ಕೆಯಾಗಿರುವ ಅವರ ಕಿರು ಪರಿಚಯ ಇಲ್ಲಿದೆ.
1953 ಮಾರ್ಚ್ 3ರಂದು ದಕ್ಷಿಣ ಕನ್ನಡ ಜಿಲ್ಲೆ ದೇವರ ಗುಂಡದಲ್ಲಿ (ತಂದೆ ವೆಂಕಪ್ಪ ಮತ್ತು ತಾಯಿ ಕಮಲಾ) ಜನಿಸಿದ ಡಿ.ವಿ. ಸದಾನಂದ ಗೌಡರು, ಹಾಲಿ ಸಂಸದರಾಗಿದ್ದಾರೆ. 1980ರಲ್ಲಿ ವೈವಾಹಿಕ ಜೀವನಕ್ಕೆ ಪ್ರವೇಶ, ಪತ್ನಿ : ಡಾಟಿ ಸದಾನಂದ ಗೌಡ, ಪುತ್ರ ಕಾರ್ತಿಕ್ ಇದ್ದಾನೆ.
1953 ಮಾರ್ಚ್ 3ರಂದು ದಕ್ಷಿಣ ಕನ್ನಡ ಜಿಲ್ಲೆ ದೇವರ ಗುಂಡದಲ್ಲಿ (ತಂದೆ ವೆಂಕಪ್ಪ ಮತ್ತು ತಾಯಿ ಕಮಲಾ) ಜನಿಸಿದ ಡಿ.ವಿ. ಸದಾನಂದ ಗೌಡರು, ಹಾಲಿ ಸಂಸದರಾಗಿದ್ದಾರೆ. 1980ರಲ್ಲಿ ವೈವಾಹಿಕ ಜೀವನಕ್ಕೆ ಪ್ರವೇಶ, ಪತ್ನಿ : ಡಾಟಿ ಸದಾನಂದ ಗೌಡ, ಪುತ್ರ ಕಾರ್ತಿಕ್ ಇದ್ದಾನೆ.
ವ್ಯಾಸಂಗ: ಬಿಎಸ್ಸಿ ಎಲ್‌ಎಲ್‌ಬಿ, ಪುತ್ತೂರು ಸೇಂಟ್ ಫಿಲೋಮಿನಾ ಕಾಲೇಜು, ಕರ್ನಾಟಕ ಮತ್ತು ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ.
ಜನಸಂಘದ ಪ್ರಾಥಮಿಕ ಸದಸ್ಯನಾಗಿ ರಾಜಕಾರಣಕ್ಕೆ ಧುಮುಕಿದ್ದ ಸದಾನಂದ ಗೌಡರು ನಂತರ ಬಿಜೆಪಿ ಸುಳ್ಯ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2006ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗುವ ಮೂಲಕ ಪಕ್ಷ ಸಂಘಟನೆಯಲ್ಲಿ ಹೆಸರು ಮಾಡಿದ್ದರು.
ಸದಾನಂದ ಗೌಡ ಜನ ಸಂಘದ ಕಾಲದಿಂದಲೂ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಿದ್ದರು.ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ದಲ್ಲೂ ಕಾರ್ಯನಿರ್ವಹಿಸಿದ್ದ ಗೌಡರು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕ, ಮಾಲೀಕರ ಸಂಘದಲ್ಲೂ ಸೇವೆ ಸಲ್ಲಿಸಿದ್ದರು.
ಕ್ರೀಡಾ ಪ್ರೇಮಿಯೂ ಆಗಿರುವ ಸದಾನಂದ ಗೌಡರು ವಿದ್ಯಾರ್ಥಿಯಾಗಿದ್ದಾಗ ಖೋಖೋ ಆಡುತ್ತಿದ್ದು, ಮೈಸೂರು ವಿವಿಯನ್ನು ಪ್ರತಿನಿಧಿಸಿದ್ದರು. ಬ್ಯಾಂಡ್ಮಿಂಟನ್ ಮತ್ತು ಟೆನಿಸ್ ಕೂಡಾ ಆಡುತ್ತಿದ್ದರು.
ಕ್ರೀಡೆಯೊಂದಿಗೆ ಕರಾವಳಿಯ ಜಾನಪದ ಕಲೆಯಾದ ಯಕ್ಷಗಾನದ ಬಗ್ಗೆಯೂ ಸದಾನಂದ ಗೌಡರಿಗೆ ವಿಶೇಷ ಆಸಕ್ತಿಯಿದೆ.
1989ರಲ್ಲಿ ಪ್ರಥಮ ಬಾರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ
19994ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ, 1999ರಲ್ಲಿ ಪುನರಾಯ್ಕೆ.
1994 ಮಹಿಳೆಯರ ದೌರ್ಜನ್ಯ ವಿರೋಧಿ ಕಾನೂನು ಕರಡು ರಚನಾ ಸಮಿತಿ ಸದಸ್ಯರಾಗಿ ಆಯ್ಕೆ
1999 ರಾಜ್ಯ ವಿಧಾನ ಸಭೆ ಉಪ ನಾಯಕರಾಗಿ ಆಯ್ಕೆ
2001 ವಿಧಾನಸಭೆಯ ಇಂಧನ, ವಿದ್ಯುತ್ ಸಮಿತಿಯ ಸದಸ್ಯರಾಗಿ ನೇಮಕ
2002 ವಿಧಾನ ಸಭೆಯ ಸಾರ್ವಜನಿಕ ಸಮಿತಿಯ ಸದಸ್ಯ
2003 ರಾಜ್ಯ ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯ
2004 ಮಂಗಳೂರು ಲೋಕಸಭಾ ಸದಸ್ಯರಾಗಿ ಆಯ್ಕೆ
2004 ವಾಣಿಜ್ಯ ಸಮಿತಿ ಸದಸ್ಯರಾಗಿ ಆಯ್ಕೆ
2004 ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
2006 ಸಂಸತ್‌ನ ವಿಶೇಷ ವಿತ್ತ ವಲಯ ಸ್ಥಾಯಿ ಸಮಿತಿ ಸದಸ್ಯರಾಗಿ ನೇಮಕ
2007ರಲ್ಲಿ ಬಿಜೆಪಿ ಅಧ್ಯಕ್ಷರಾಗಿ ಪುನರಾಯ್ಕೆ
2009-ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಎರಡನೇ ಅವಧಿಗೆ ಆಯ್ಕೆ
Click this button or press Ctrl+G to toggle between Kannada and English
December 15th, 2011 at 04:01:48
ghxV34 arghqmkvsang, [url=http://akyzwktrtovn.com/]akyzwktrtovn[/url], [link=http://jqfkkvsywbql.com/]jqfkkvsywbql[/link], http://qpujohlpgtcj.com/