ಮಂಗಳೂರು: ಡಿಸೆಂಬರ್ 16, 1971 ಭಾರತ ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ ದಿನ. ಕೇವಲ 13 ದಿನಗಳ ನಡೆದ ಯುದ್ಧದಲ್ಲಿ ಅಂದಿನ ಪೂರ್ವ ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಎಂ.ಎ.ಕೆ.ನಿಝಾಝಿ ತಮ್ಮ 93,000 ಪಾಕಿಸ್ತಾನಿ ಸೈನಿಕರು ಹಾಗೂ ಅರೆಸೈನಿಕರೊಂದಿಗೆ ಭಾರತದ ಲೆ. ಜನರಲ್ ಜೆ.ಎಸ್. ಅರೋರ ಅವರಿಗೆ ಶರಣಾದ ದಿನ. ಈ ದಿನದ ಸಂಸ್ಮರಣೆ ದಿನವನ್ನು ನಗರದ ಕದ್ರಿಯಲ್ಲಿ ಸ್ಮಾರಕ ಭವನದಲ್ಲಿ ಆಚರಿಸಲಾಯಿತು.
ಆ ಯುದ್ಧದಲ್ಲಿ ಭಾರತದ 1,426 ಸೈನಿಕರು ಕೊಲ್ಲಲ್ಪಟ್ಟಿದ್ದು, 3,611 ಸೈನಿಕರು ಗಾಯಾಳುಗಳಾಗಿದ್ದರು. ಪಾಕಿಸ್ತಾನದ 8,000 ಸೈನಿಕರು ಕೊಲ್ಲಲ್ಪಟ್ಟಿದ್ದು, 10,000 ಮಂದಿ ಗಾಯಾಳುಗಳಾಗಿದ್ದರು.
ದೇಶದ ಯೋಧರು ಮಾಡಿದ ತ್ಯಾಗ ಬಲಿದಾನಗಳ ಜೊತೆಗೆ ತಾಯ್ನಾಡಿಗೆ ತಂದುಕೊಟ್ಟ ವಿಜಯವನ್ನು ನೆನೆಯುವುದು ನಾಗರಿಕರ ಕರ್ತವ್ಯ. ಯೋಧರ ಯುದ್ಧ ಸ್ಮಾರಕಕ್ಕೆ ಹೂಹಾರ ಹಾಕಿ, ಪ್ರಾರ್ಥನೆಗಳೊಂದಿಗೆ ನಮನ ಸಲ್ಲಿಸಲಾಯಿತು.
ನಿವೃತ್ತರಾದ ಮಿಲಿಟರಿ ಅಧಿಕಾರಿಗಳಾದ ವಿಕ್ರಂ ದತ್ತ, ಎನ್. ಎಸ್. ಭಂಡಾರಿ, ಬಾಲಕೃಷ್ಣ, ಎಸ್. ಎನ್. ಐರನ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English