ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಆದೇಶ ನೀಡಿದ ಪ್ರಧಾನ ಹಸಿರು ಪೀಠ,

3:45 PM, Saturday, December 17th, 2016
Share
1 Star2 Stars3 Stars4 Stars5 Stars
(No Ratings Yet)
Loading...

National green tribunalಮಂಗಳೂರು: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಕಾಮಗಾರಿ ಪ್ರದೇಶದ ಸಾಕ್ಷಾತ್ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ದೆಹಲಿಯ ಪ್ರಧಾನ ಹಸಿರು ಪೀಠ, ಕೇಂದ್ರ ಪರಿಸರ ಸಚಿವಾಲಯಕ್ಕೆ ಆದೇಶ ನೀಡಿದೆ.

ಎತ್ತಿನಹೊಳೆ ಯೋಜನೆ ಕಾಮಗಾರಿ ವಿರುದ್ಧ ಬೆಂಗಳೂರಿನ ಕೆ.ಎನ್.ಸೋಮಶೇಖರ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹಸಿರು ಪೀಠ, ಮರಗಳನ್ನು ಕಡಿದ ಬಗ್ಗೆ ಅರ್ಜಿದಾರರ ಜೊತೆಗೆ ಜಂಟಿ ಸಮೀಕ್ಷೆಗೆ ತಾಕೀತು ಮಾಡಿದೆ.

ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರ ಪೀಠ ಹೊರಡಿಸಿದ ಆದೇಶದಲ್ಲಿ, 2017 ರ ಜ.2 ಮತ್ತು 3ರಂದು ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಅರ್ಜಿದಾರರ ಜೊತೆಗೆ ಭೇಟಿ ನೀಡಬೇಕು. ಈ ಯೋಜನೆಗೆ ಎಷ್ಟು ಮರಗಳನ್ನು ಕಡಿಯಲಾಗಿದೆ ಎಂಬ ಬಗ್ಗೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಬೇಕು. ಈ ಕುರಿತ ವರದಿಯನ್ನು ಜ.14ರ ಮೊದಲು ಹಸಿರು ಪೀಠಕ್ಕೆ ಸಲ್ಲಿಸಬೇಕು. ಮುಂದಿನ ವಿಚಾರಣೆಯನ್ನು ಜ.16ಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿಸಲಾಯಿತು.

ಎತ್ತಿನಹೊಳೆ ಯೋಜನೆಗೆ ಕಾಮಗಾರಿ ನಡೆಸಬೇಕಾದರೆ ಪ್ರತಿ ಹಂತಗಳಲ್ಲಿಯೂ ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಮರಗಳನ್ನು ಕಡಿಯಲಾಗಿದೆ. ಆದರೆ ಈ ಬಗ್ಗೆ ಹಸಿರುಪೀಠಕ್ಕೆ ಕರ್ನಾಟಕ ನೀರಾವರಿ ನಿಗಮ ನಿಯಮ ಉಲ್ಲಂಘಿಸಿಲ್ಲ ಎಂದು ಸಮಜಾಯಿಷಿ ನೀಡಿದೆ.

ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಕೂಡ 2,700 ಮರಗಳನ್ನು ಕಡಿದಿರುವ ಬಗ್ಗೆ ಹಸಿರುಪೀಠಕ್ಕೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ 27 ಸಾವಿರ ಗಿಡಗಳನ್ನು ನೆಡುವಂತೆ ಹಸಿರುಪೀಠ ಸೂಚಿಸಿದರೂ ಆ ಬಗ್ಗೆ ವರದಿ ಸಲ್ಲಿಸಲು ವಿಫಲರಾಗಿದ್ದಾರೆ.

ಈಗ ಎಷ್ಟು ಮರಗಳನ್ನು ಕಡಿಯಲಾಗಿದೆ ಎಂಬ ಹಸಿರುಪೀಠದ ಪ್ರಶ್ನೆಗೂ ಸರ್ಕಾರದಿಂದ ನಿಖರವಾದ ಉತ್ತರ ಸಿಗುತ್ತಿಲ್ಲ. ಅಲ್ಲದೆ 500 ಮರಗಳನ್ನು ಕಡಿದು 500 ಗಿಡಗಳನ್ನು ನೆಡಲಾಗಿದೆ ಎನ್ನುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್ ಹಸಿರು ಪೀಠದ ಮುಂದೆ ಅಹವಾಲು ಮಂಡಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English