ಪ್ರೆಸ್ ಕ್ಲಬ್ ದಿನಾಚರಣೆ: ಪತ್ರಕರ್ತರ ತಂಡದಿಂದ ಯಕ್ಷಗಾನ ಪ್ರದರ್ಶನ

12:15 PM, Monday, December 19th, 2016
Share
1 Star2 Stars3 Stars4 Stars5 Stars
(5 rating, 1 votes)
Loading...

Press-club-dayಮಂಗಳೂರು: ಕರಾವಳಿಯ ಪ್ರಮುಖ ಜಾನಪದೀಯ ಕಲೆ ಯಕ್ಷಗಾನ. ಯಕ್ಷಗಾನ ಪ್ರದರ್ಶನ ನಡೆಸುವ ಕಲಾವಿದರು ಹಲವು ಪ್ರದರ್ಶನಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಇಂತಹ ಯಕ್ಷಗಾನವನ್ನು ಮಂಗಳೂರಿನ ಪತ್ರಕರ್ತರ ತಂಡವೊಂದು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರವಾಯಿತು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ನಗರದ ಸ್ಕೌಟ್ ಭವನದಲ್ಲಿ ಇಂದು ಹಮ್ಮಿಕೊಂಡ ಪ್ರೆಸ್ ಕ್ಲಬ್ ದಿನಾಚರಣೆ ಸಂದರ್ಭದಲ್ಲಿ ಮಂಗಳೂರಿನ ಪತ್ರಕರ್ತರ ತಂಡ ಮಹಿಷಮರ್ದಿನಿ ಯಕ್ಷಗಾನ ಪ್ರದರ್ಶಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.

Press-club-dayಸದಾ ಸುದ್ದಿಯ ಬ್ಯುಸಿಯ್ಯಲಿದ್ದ ಈ ಪತ್ರಕರ್ತರು ಕಳೆದ ಒಂದು ವಾರದಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಂದ ತರಬೇತಿ ಪಡೆದು ಯಕ್ಷಗಾನ ಪ್ರದರ್ಶನ ಮಾಡಿದರು.

ಇದಕ್ಕು ಮೊದಲು ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಸಾಧನೆ ಮಾಡುತ್ತಿರುವ ಕುಂದಾಪುರದ ಮದರ್ ಥೆರೆಸಾ ಪದವಿ ಪೂರ್ವ ಕಾಲೇಜಿನ ಕುಮಾರಿ ರೆನಿಟಾ ಲೊಬೊ ಹಾಗೂ ಕಡಬದ ಏಮ್ಸ್ ಕಾಲೇಜಿನ ಸಮೀರಾ ಹಾಗೂ ಫೌಝಿಯಾ ಬಿ.ಎಸ್. ಅವರಿಗೆ ಈ ವರ್ಷದ ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

press-club-day-3

press-club-day-4

Press-club-day

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English