ಮಂಗಳೂರು: ಮಂಡ್ಯದ ಪಿಇಟಿ ಈಜು ಕೇಂದ್ರದಲ್ಲಿ ರಾಜ್ಯ ಈಜು ಸಂಸ್ಥೆಯ ವತಿಯಿಂದ ನಡೆದ 17ನೇ ರಾಜ್ಯ ಮಟ್ಟದ ಶಾರ್ಟ್ ಕೋರ್ಸ್ ಈಜು ಸ್ಪರ್ಧೆಯಲ್ಲಿ ಇಲ್ಲಿನ ಮಂಗಳಾ ಈಜು ಕ್ಲಬ್ಬಿನ ಸದಸ್ಯೆ ಎಸ್.ಆರ್. ರಚನಾ ರಾವ್ ಗುಂಪು-3ರ ಹುಡುಗಿಯರ ವಿಭಾಗದಲ್ಲಿ 50 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಂಗಳೂರಿನ ಶಿವರಂಜಿನಿಯವರು ನಿರ್ಮಿಸಿದ್ದ 14 ವರ್ಷದ ಹಳೆಯ ದಾಖಲೆ (37.29) ಮುರಿದು, ಹೊಸ ದಾಖಲೆಯೊಂದಿಗೆ (36.90) ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಇದರೊಂದಿಗೆ 25 ಮೀ. ಫ್ರೀ ಸ್ಟೈಲ್‌ನಲ್ಲಿ ಚಿನ್ನದ ಪದಕ, 100ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿಯ ಪದಕ ಗೆದ್ದು 67ಅಂಕಗಳೊಂದಿಗೆ ಈ ಗುಂಪಿನ ಅತ್ಯುತ್ತಮ ಈಜುಗಾರ್ತಿ ಪ್ರಶಸ್ತಿ ಗಳಿಸಿದ್ದಾರೆ.
ಹಲವಾರು ವರ್ಷಗಳ ಬಳಿಕ ಕುಡ್ಲ ವಲಯಕ್ಕೆ ಈ ಪ್ರಶಸ್ತಿ ದಕ್ಕಿದೆ. ಇವರು ಜನವರಿಯಲ್ಲಿ ಬೆಳಗಾಂನಲ್ಲಿ ನಡೆಯಲಿರುವ `ದಕ್ಷಿಣ ವಲಯ ಈಜು ಸ್ಪರ್ಧೆಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಗುಂಪು-2 ರ ಹುಡುಗಿಯ ವಿಭಾಗದಲ್ಲಿ ಕ್ಲಬ್ಬಿನ ಇನ್ನೋರ್ವ ಸದಸ್ಯೆ ಸಾನ್ಯಾ ಡಿ. ಶೆಟ್ಟಿ 50 ಮೀ. ಹಾಗೂ 200 ಮೀ. ಬಟರ್ ಫ್ಲೈ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಇವರಿಬ್ಬರೂ ಶ್ರೀ ರಾಮಕೃಷ್ಣ ಶಾಲೆಯ ವಿದ್ಯಾರ್ಥಿನಿಯರು.
ಇವರು ಮಂಗಳಾ ಈಜು ಕ್ಲಬ್‌ನ ಅಧ್ಯಕ್ಷ ಪ್ರಮುಖ್ ರೈ ಅವರ ಪ್ರೋತ್ಸಾಹದೊಂದಿಗೆ ಕ್ಲಬ್ಬಿನ ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ ಮತ್ತು ಸಹಾಯಕ ತರಬೇತುದಾರ ಎಂ. ಶಿವಾನಂದ ಗಟ್ಟಿ, ಸಂತೋಷ್ ಪಿ.ಎಂ., ದೀಕ್ಷಿತ್ ಉರ್ವ, ವಿಕೇಶ್, ವಿಶಾಲ್ ಹಾಗೂ ಪುಂಡಲೀಕ್ ಖಾರ್ವ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
Click this button or press Ctrl+G to toggle between Kannada and English