ಮಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟರಾದ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ ಹಾಗೂ ಸಿಂಧೂ ಲೋಕನಾಥ್ ಇದೀಗ ಕೋಸ್ಟಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಸುರೇಶ್ ಭಂಡಾರಿ ನಿರ್ಮಾಣದ ಅಂಬರ್ ಕೇಟರರ್ಸ್ ಎಂಬ ಪಕ್ಕಾ ಕಾಮಿಡಿ ಚಿತ್ರಕ್ಕೆ ಇವರು ಬಣ್ಣ ಹಚ್ಚಲಿದ್ದಾರೆ. ಇದೊಂದು ಮರೆಯದ ಕ್ಷಣ. ಕರಾವಳಿಯಲ್ಲೂ ನನ್ನ ಅಭಿಮಾನಿಗಳಿದ್ದಾರೆ. ನನ್ನ ಯಜಮಾನ (ದಿವಂಗತ ವಿಷ್ಣುವರ್ಧನ್)ರನ್ನು ಇಷ್ಟಪಡುವವರೂ ಇದ್ದಾರೆ. ಇದೀಗ ತುಳು ಚಿತ್ರದಲ್ಲೇ ನಟಿಸುವ ಅವಕಾಶ ದೊರಕಿದೆ.
ಕಲಾವಿದರಿಗೆ ಭಾಷೆಯ ಹಂಗಿಲ್ಲ. ಅಲ್ಲಿ ನಟನೆಗೆ ಪ್ರಾಮುಖ್ಯತೆ. ಭಾಷೆ ಗೊತ್ತಿಲ್ಲದಿದ್ದರೂ ನಟನೆಯ ಮೂಲಕ ಪ್ರೇಕ್ಷಕರನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು ಭಾರತಿ ಮೇಡಂ.
ಹಾಗೆ ನೋಡಿದರೆ ಬಹುಭಾಷಾ ನಟ ಶರತ್ ಲೋಹಿತಾಶ್ವರಿಗೂ ತುಳು ಚಿತ್ರ ಹೊಸದು. ನಿರ್ದೇಶಕ ಜಯಪ್ರಸಾದ್ ತುಳುವಿನಲ್ಲೂ ನಟಿಸಬೇಕೆಂದು ಕೇಳಿಕೊಂಡಾಗ ತಕ್ಷಣ ಒಪ್ಪಿಕೊಂಡಿದ್ದಾರೆ. ಕೋಸ್ಟಲ್‌ವುಡ್ ಕೂಡಾ ಕೆಲವು ದಾಖಲೆಗಳನ್ನು ಸೃಷ್ಟಿ ಮಾಡುತ್ತಿರುವುದರಿಂದ ನಟಿಸುವಾಸೆ ಗರಿಗೆದರಿದೆ ಎಂದಿದ್ದಾರೆ.
ಸಿಂಧು ಲೋಕಾನಾಥ್ ಮದುಮಗಳ ಧಿರಿಸಿನಲ್ಲಿ ಮುದ್ದಾಗಿಯೇ ಕಾಣುತ್ತಿದ್ದರು. ಭಾರತಿಯಮ್ಮ, ಶರತ್ ಸರ್ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರೂ ತನಗೆ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದು ತುಳುವಿನಲ್ಲಿ. ಇದು ಸಿಂಧು ಅವರ ಸಂತೋಷಕ್ಕೆ ಕಾರಣವಂತೆ.
Click this button or press Ctrl+G to toggle between Kannada and English