ದಿಡ್ಡಳ್ಳಿಯ ಆದಿವಾಸಿಗಳಿಗಾದ ಅನ್ಯಾಯವನ್ನು ಖಂಡಿಸಿ ದಲಿತ ದಮನಿತರ ಪ್ರತಿಭಟನೆ

3:12 PM, Wednesday, December 21st, 2016
Share
1 Star2 Stars3 Stars4 Stars5 Stars
(No Ratings Yet)
Loading...

dalit-organisation-ಮಂಗಳೂರು: ಕೊಡಗು ಜಿಲ್ಲೆಯ ದಿಡ್ಡಳ್ಳಿಯ ಆದಿವಾಸಿಗಳಿಗಾದ ಅನ್ಯಾಯವನ್ನು ಖಂಡಿಸಿ ದಲಿತ ದಮನಿತರ ಸ್ವಾಭಿಮಾನ ಹೋರಾಟ ಸಮಿತಿ ಸದಸ್ಯರು ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘಟನೆಯ ಮುಖಂಡ ರಘುವೀರ್ ಸೂಟರ್‍ಪೇಟೆ ಮಾತನಾಡಿ, ಜನಸೇವಕರಾಗಬೇಕಿದ್ದ ಅಧಿಕಾರಿಗಳು ಜನಪೀಡಕರಾಗಿರುವುದು ವಿಪರ್ಯಾಸ. ಪೊಲೀಸ್ ಅಸ್ತ್ರ ಬಳಸಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಇದು ಸಂವಿಧಾನ ವಿರೋಧಿ ಕೃತ್ಯ ಎಂದರು.

ದ.ಕ.ಜಿಲ್ಲಾ ಕೋಮುಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್. ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ, ವಿವಿಧ ಸಂಘಟನೆಯ ಮುಖಂಡರಾದ ಅಶೋಕ್ ಕೊಂಚಾಡಿ, ಸಂಜೀಪ, ಶಬ್ಬೀರ್, ಸರ್ಫ್ರಾಝ್, ಮುಹ್ಸಿನ್, ಎಸ್ಪಿ ಆನಂದ ಪಾಲ್ಗೊಂಡಿದ್ದರು.

dalit-organisation-8

dalit-organisation-

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English