ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರನಾಥ್‌ ಕಾಮತ್‌ ವಿಶೇಷ ಅಭಿಯೋಜಕರಾಗಿ ನೇಮಕ

12:04 PM, Saturday, December 24th, 2016
Share
1 Star2 Stars3 Stars4 Stars5 Stars
(No Ratings Yet)
Loading...

Vinayak-Baliga-murder-caseಮಂಗಳೂರು: ಮಾರ್ಚ್ 21 ರಂದು ನಡೆದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನ್ಯಾಯವಾದಿ ರವೀಂದ್ರನಾಥ್‌ ಕಾಮತ್‌ ಅವರನ್ನು ಸರ್ಕಾರಿ ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಕೊಲೆ ನಡೆದು 8 ತಿಂಗಳಾದರೂ ಸಮಗ್ರ ತನಿಖೆಯಾಗದ ಕಾರಣ ಇವರನ್ನು ರಾಜ್ಯ ಸರ್ಕಾರ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಿದೆ ಎಂದು ತಿಳಿದು ಬಂದಿದೆ.

51 ವರ್ಷದ ವಿನಾಯಕ ಪಿ. ಬಾಳಿಗಾ ಅವರನ್ನು 2016 ಮಾರ್ಚ್‌ 21 ರಂದು ಬೆಳಗ್ಗೆ ನಗರದ ಕೊಡಿಯಾಲ್‌ಬೈಲ್‌ನ ಬೆಸೆಂಟ್‌ ಸ್ಕೂಲ್‌ 2 ನೇ ಲೇನ್‌ ಸ್ಟರ್ಲಿಂಗ್‌ ಚೇಂಬರ್‌ ಹಿಂಬದಿ ರಸ್ತೆಯಲ್ಲಿ ಅವರ ಮನೆ ಸಮೀಪ ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಲಾಗಿತ್ತು.

ಬರ್ಕೆ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English