ನ್ಯಾಯಾಲಯದಲ್ಲಿ ಕೊಳೆಯುತ್ತಿರುವ ಪ್ರಕರಣಗಳನ್ನು ಕೂಡಲೇ ಇತ್ಯರ್ಥಗೊಳಿಸಬೇಕು: ಜನಾರ್ದನ ಪೂಜಾರಿ

11:05 AM, Monday, December 26th, 2016
Share
1 Star2 Stars3 Stars4 Stars5 Stars
(No Ratings Yet)
Loading...

poojaryಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಗೆದ್ದು ಬಂದಾಗ ಐದು ವರ್ಷಗಳವರೆಗೆ ಆಸ್ತಿ ತೆರಿಗೆ ಹೆಚ್ಚಿಸುವುದಿಲ್ಲ ಎಂದು ಜನತೆಗೆ ವಾಗ್ದಾನ ಮಾಡಿತ್ತು. ಆದರೆ, ತನ್ನ ವಾಗ್ದಾನವನ್ನು ತಾನೇ ಮರೆತಿದೆ. ಪಾಲಿಕೆ ಸದಸ್ಯರ ಈ ತಪ್ಪಿನಿಂದಾಗಿ ಅಂದು ಪ್ರತಿಜ್ಞೆ ವಿಧಿ ಬೋಧಿಸಿದ ನಾನೇ ಜನರಲ್ಲಿ ಕ್ಷಮೆ ಕೋರುತ್ತೇನೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ ಜನರಿಗೆ ಮಾಡುವ ಅತ್ಯಂತ ದೊಡ್ಡ ಮೋಸ. ಜನತೆಯ ವಿಶ್ವಾಸವನ್ನೇ ಧೂಳಿಪಟ ಮಾಡಲಾಗಿದೆ. ತಮ್ಮ ಪ್ರಮಾಣಕ್ಕೆ ತಾವೇ ಬದ್ಧರಾಗಿಲ್ಲ ಎಂದು ನೋವು ವ್ಯಕ್ತಪಡಿಸಿದರು.

ಮಹಾಬಲ ಮಾರ್ಲ ಅವರು ಮೇಯರ್ ಆಗಿದ್ದಾಗಲೂ ನಗರಾಭಿವೃದ್ಧಿ ಸಚಿವಾಲಯದಿಂದ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಕರೆ ಬಂದಿತ್ತು. ಆದರೆ, ಅವರು ಅದಕ್ಕೇ ಸೊಪ್ಪು ಹಾಕಲಿಲ್ಲ. ಈಗ ಮತ್ತೆ ಕರೆ ಬಂದಿದೆ ಅಂದಕೂಡಲೇ ಜನರಿಗೆ ಕೊಟ್ಟ ವಾಗ್ದಾನವನ್ನು ಮುರಿಯಬೇಕಿಲ್ಲ. ಇದಕ್ಕೆಲ್ಲಾ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರಿಗೆ ಭಾಷೆಯಿಲ್ಲ ಎಂದರು.

ಸಿದ್ದರಾಮಯ್ಯರಿಗೆ ಆಡಳಿತ ಗೊತ್ತಿಲ್ಲವೇ? ಪಾಲಿಕೆ ರೆವೆನ್ಯೂ ಹೆಚ್ಚಿಸಲು ತೆರಿಗೆ ಪಾವತಿ ಮಾಡದವರನ್ನು ಹಿಡಿಯಬೇಕು. ವರ್ಷಾನುಗಟ್ಟಲೇ ನ್ಯಾಯಾಲಯದಲ್ಲಿ ಕೊಳೆಯುತ್ತಿರುವ ಪ್ರಕರಣಗಳನ್ನು ಕೂಡಲೇ ಇತ್ಯರ್ಥಗೊಳಿಸಬೇಕು. ತೆರಿಗೆ ಕಟ್ಟದೆ ಸರ್ಕಾರಕ್ಕೆ ಮೋಸ ಮಾಡುವವರ ಮೇಲೆ ಕ್ರಮತೆಗೆದುಕೊಳ್ಳಬೇಕು. ಅದು ಬಿಟ್ಟು ಜನಸಾಮಾನ್ಯರಿಗೆ ತೊಂದರೆ ಮಾಡುವುದಲ್ಲ ಎಂದರು.

ಐಟಿ ದಾಳಿ ಸಂದರ್ಭ ಸಿಕ್ಕಿಬಿದ್ದ ಅಧಿಕಾರಿ ಚಿಕ್ಕರಾಯಪ್ಪನಿಗೆ ನಿರೀಕ್ಷಣಾ ಜಾಮೀನು ದೊರೆಯದಂತೆ ತಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English