ಎಸ್‌ಡಿಸಿಸಿ ಬ್ಯಾಂಕಿನ ಅಧೀನದಲ್ಲಿ ಕೋಟ್ಯಾಂತರ ಹಣ: ಬ್ಯಾಂಕಿಗೆ ಐಟಿ ಮತ್ತು ಇಡಿ ಅಧಿಕಾರಿಗಳ ದಾಳಿ

11:00 AM, Wednesday, December 28th, 2016
Share
1 Star2 Stars3 Stars4 Stars5 Stars
(No Ratings Yet)
Loading...

SCDCC-bankಮಂಗಳೂರು: ಕೇಂದ್ರ ಸರ್ಕಾರ 500- 1000 ನೋಟು ನಿಷೇಧ ಮಾಡಿದ ನಂತರ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿ ಡಿ ಸಿ ಸಿ) ನಲ್ಲಿ ಕೋಟ್ಯಾಂತರ ಹಣ ಅಸಹಜವಾಗಿ ಜಮೆಯಾದ ಹಿನ್ನೆಲೆಯಲ್ಲಿ ಇಂದು ಬ್ಯಾಂಕಿಗೆ ಐಟಿ ಮತ್ತು ಇಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ನಂತರದ ಐದು ದಿನಗಳಲ್ಲಿ ಕೋಟ್ಯಾಂತರ ಹಣ ಎಸ್‌ಡಿಸಿಸಿ ಬ್ಯಾಂಕಿನ ಅಧೀನದಲ್ಲಿರುವ ಸಹಕಾರಿ ಬ್ಯಾಂಕುಗಳಲ್ಲಿ ಸಂಗ್ರಹವಾಗಿತ್ತು.

ಈ ಬಗ್ಗೆ ಈಗಾಗಲೇ ಐಟಿ ಮತ್ತು ಇಡಿ ಅಧಿಕಾರಿಗಳು ಎಸ್‌ಡಿಸಿಸಿ ಬ್ಯಾಂಕಿನಲ್ಲಿ ಮಾಹಿತಿಯನ್ನು ಕೇಳಿದ್ದರು. ಇಂದು ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಎಸ್‌ಡಿಸಿಸಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English