ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ನಿಶ್ಚಿತ: ಜನಾರ್ದನ ಪೂಜಾರಿ

11:12 AM, Thursday, December 29th, 2016
Share
1 Star2 Stars3 Stars4 Stars5 Stars
(No Ratings Yet)
Loading...

Janardana Poojaryಮಂಗಳೂರು: ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ನಿಶ್ಚಿತವೆಂದು ಕಾಂಗ್ರೆಸ್‌ನವರೇ ಆದ ಜನಾರ್ದನ ಪೂಜಾರಿ ಪಕ್ಷದ ವಿರುದ್ಧವೇ ಭವಿಷ್ಯ ನುಡಿದಿದ್ದಾರೆ.

ನಂಜನಗೂಡು ಉಪಚುನಾವಣೆಗೆ ಕಾಂಗ್ರೆಸ್‌‌ನಿಂದ ಎಷ್ಟೇ ಒಳ್ಳೆಯ ಅಭ್ಯರ್ಥಿ ಹಾಕಿದರು ಪಕ್ಷ ಸೋಲುತ್ತದೆ. ಶ್ರೀನಿವಾಸ್ ಪ್ರಸಾದ್ ಪಕ್ಷದ ಮಾನ ಹರಾಜು ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಈಗಲಾದರು ಎಚ್ಚೆತ್ತುಕೊಳ್ಳಿ. ಜನರಿಂದ, ಕಾರ್ಯಕರ್ತರಿಂದ ನೀವು ಅಧಿಕಾರಕ್ಕೆ ಬಂದಿದ್ದೀರಾ. ಕಾಂಗ್ರೆಸ್‌ನಲ್ಲಿ ಗೊಂದಲ ಇರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಧೂಳಿಪಟವಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ ಎಂದು ಸ್ವಪಕ್ಷದ ವಿರುದ್ಧವೇ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

ನನಗೆ ಇನ್ನೂ ಎಐಸಿಸಿಯಿಂದ ಯಾವುದೇ ನೋಟಿಸ್‌ ಬಂದಿಲ್ಲ, ಅದು ಬರುವುದೂ ಇಲ್ಲ. ಕೆಪಿಸಿಸಿ ನಾಯಕರು ನನಗಿಂತ ಬುದ್ಧಿವಂತರು ಎಂದು ಜನಾರ್ದನ ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆ ಸ್ವಯಂಘೋಷಿತ ಆಸ್ತಿ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೇಯರ್ ಅವರಲ್ಲಿ ಪತ್ರಿಕಾಗೋಷ್ಟಿಗೆ ಬರುವ ಮೊದಲು ಮಾಹಿತಿ ಕೇಳಿದ್ದೆ. ಆದರೆ ಮೇಯರ್ ತಮಗೆ ಮೊದಲೆ ಗೊತ್ತಿತ್ತು ಎಂದು ಸುಳ್ಳು ಹೇಳಿದ್ದಾರೆ. ಮೇಯರ್ ಮನಪಾ ಜನರ ಕ್ಷಮೆಯಾಚಿಸಲಿ. ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಿಸುವುದಿಲ್ಲ ಎಂದು ಮಂಗಳೂರು ಜನತೆಗೆ ಭರವಸೆ ನೀಡಿದ್ದೇವು. ಈ ಸಭೆಯಲ್ಲಿ ಮೇಯರ್ ಕೂಡ ಇದ್ದರು ಎಂದು ಮೇಯರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಆದರೆ ಕರಾವಳಿಯ ಇಬ್ಬರು ಮಾಜಿ ಸಿಎಂ ಎತ್ತಿನಹೊಳೆ ಯೋಜನೆಗೆ ಬೆಂಬಲ ನೀಡಿದ್ದಾರೆ. ಮಾಜಿ ಸಿಎಂ ಡಿವಿ ಸದಾನಂದಗೌಡ 2000ಟಿಎಂಸಿ ನೀರು ಸಮುದ್ರಕ್ಕೆ ಪೋಲಾಗುತ್ತಿದೆ ಎಂದಿದ್ದಾರೆ. ಅವರು ಎಲ್ಲಿ ನಿಂತು ಅಳತೆ ಮಾಡಿದ್ದಾರೆ. ಮತ್ತೊಬ್ಬ ಮಾಜಿ ಸಿಎಂ ವೀರಪ್ಪ ಮೊಯ್ಲಿ ಎತ್ತಿನಹೊಳೆ ಅನುಷ್ಠಾನ ಮಾಡುತ್ತೇವೆ ಅಂದಿದ್ದಾರೆ. ತಾಕತ್ತಿದ್ದರೆ ಉಪ್ಪಿನಂಗಡಿ ಜನರನ್ನು ಭೇಟಿಯಾಗಿ ಮಾತುಕತೆ ನಡೆಸಲಿ. ಇಬ್ಬರು ಮಾಜಿ ಸಿಎಂಗಳನ್ನು ಇತಿಹಾಸ ಕ್ಷಮಿಸುವುದಿಲ್ಲ ಎಂದು ಜನಾರ್ದನ ಪೂಜಾರಿ ಕಿಡಿಕಾರಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English