ಭಾರತ ತಂಡದಲ್ಲಿ ಮಲೇಶ್ಯಾದಲ್ಲಿ ಮಿಂಚಿದ ಮುಳ್ಳೇರಿಯಾದ ಪ್ರತಿಭೆ

11:07 PM, Thursday, December 29th, 2016
Share
1 Star2 Stars3 Stars4 Stars5 Stars
(5 rating, 1 votes)
Loading...

throw ballಮುಳ್ಳೇರಿಯ : ಮಲೇಶ್ಯಾದ ಸೆಲಂಗಾರ್ ಬಿದಾರಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಂತರಾಷ್ಟ್ರೀಯ ಮಟ್ಟದ ವನಿತಾ ಜೂನಿಯರ್ ಏಷ್ಯನ್ ತ್ರೋಬಾಲ್ ಚಾಂಪಿಯನ್ಶಿಪ್ ಪೈನಲ್ ಪಂದ್ಯಾಟದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು 2-0 ನೇರ ಸೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿದೆ.

ಬುಧವಾರದಂದು ನಡೆದ ಲೀಗ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಸುತ್ತಿನಲ್ಲಿ 25-8 ಹಾಗೂ ದ್ವಿತೀಯ ಸುತ್ತಿನಲ್ಲಿ 25-9 ಅಂಕಗಳನ್ನು ಗಳಿಸಿ ಪಾಕಿಸ್ತಾನವನ್ನು ಸೋಲಿಸಿದ್ದರು. ಇದರ ಆತ್ಮವಿಶ್ವಾಸದಲ್ಲಿ ಮತ್ತೆ ಪೈನಲ್ ಪಂದ್ಯದಲ್ಲಿ ಕಣಕಿಳಿದ ಭಾರತೀಯ ವನಿತೆಯರು ಮತ್ತೊಮ್ಮೆ ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ವಿಜಯ ಪತಾಕೆಯನ್ನು ಹಾರಿಸಿದರು.

ಪೈನಲ್ ಪಂದ್ಯಾಟವು ಕೊನೆಯ ತನಕವೂ ಅತ್ಯಂತ ರೋಚಕತೆಯಿಂದ ಕೂಡಿದ್ದೂ ಪಂದ್ಯದ ಉದ್ದಕ್ಕೂ ಕುತೂಹಲವನ್ನು ಕಾಯ್ದುಕೊಂಡಿತ್ತು. ಪೈನಲ್ ಪಂದ್ಯದ ಮೊದಲ ಹಾಗೂ ದ್ವಿತೀಯ ಸುತ್ತಿನಲ್ಲಿ ಭಾರತ ತಂಡವು 26-24 ಅಂಕಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿದೆ.

throw ballಭಾರತದ ತಂಡದಲ್ಲಿ ಕಾಸರಗೋಡು ಜಿಲ್ಲೆಯ ಗಡಿ ಗ್ರಾಮ ಮುಳ್ಳೇರಿಯಾದ ಯಶ್ಮಿತ ಎಂ. ಅವರೂ ಭಾಗವಹಿಸಿದ್ದರು. ಇವರು ಅಗಲ್ಪಾಡಿ ಶ್ರೀ ಅನ್ನಪೂಣರ್ೇಶ್ವರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದ ವಿದ್ಯಾಥರ್ಿನಿಯಾಗಿದ್ದು ಗ್ರಾಮೀಣ ಪ್ರದೇಶವಾದ ಬೆಳ್ಳೂರು ಗ್ರಾಮ ನಿವಾಸಿ ಕೂಲಿ ಕಾಮರ್ಿಕ ಮಿತ್ತಜಾಲು ಸುಬ್ಬಣ್ಣ ನಾಯ್ಕ ಹಾಗೂ ಸುಮತಿ ದಂಪತಿಯ ಪುತ್ರಿಯಾಗಿದ್ದಾರೆ. ಶಾಲಾ ದೈಹಿಕ ಶಿಕ್ಷಕ ಶಶಿಕಾಂತ್ ಬಲ್ಲಾಳ್ ಚಿಪ್ಪಾರು ತ್ರೋಬಾಲ್ ತರಬೇತುದಾರರಾಗಿದ್ದಾರೆ.

ಭಾರತ ತಂಡದ ಸಾಧನೆಗೆ ಯುವಬ್ರಿಗೇಡ್ ಕಾಸರಗೋಡು ಜಿಲ್ಲಾ ಸಮಿತಿಯು ಅಭಿನಂದನೆಯನ್ನು ಸಲ್ಲಿಸಿದೆ. ಕಾಸರಗೋಡು ಜಿಲ್ಲಾಧಿಕಾರಿ ಜೀವನ್ಬಾಬು, ಕೇರಳ ತ್ರೋಬಾಲ್ ಅಸೋಸಿಯೇಶನ್ನ ಪ್ರಧಾನ ಕಾರ್ಯದಶರ್ಿ ಕೆ.ಎಂ. ಬಲ್ಲಾಳ್, ಮಲ್ಲ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಆನೆಮಜಲು ವಿಷ್ಣು ಭಟ್, ಕೇರಳ ಮರಾಠಿ ಯೂತ್ ಜನರೇಶನ್ ಕ್ಲಬ್ ಸ್ಥಾಪಕ ಅಧ್ಯಕ್ಷ ಸುಬ್ರಾಯ ನಾಯ್ಕ ಕಾಸರಗೋಡು, ಅಗಲ್ಪಾಡಿ ಅನ್ನಪೂಣರ್ೇಶ್ವರಿ ಶಾಲೆಯ ಪ್ರಬಂಧಕರು, ಪ್ರಾಂಶುಪಾಲರು, ರಕ್ಷಕ ಶಿಕ್ಷಕ ಸಂಘ ಮತ್ತು ಸಿಬ್ಬಂದಿವರ್ಗ ಅಭಿನಂದಿಸಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English