ಅವೈಜ್ಞಾನಿಕವಾಗಿರುವ ಎತ್ತಿನಹೊಳೆಯಂತಹ ಅಸಂಬದ್ಧ ಯೋಜನೆಗಳನ್ನು ಕೈಬಿಡಿ: ಟಿ.ವಿ.ರಾಮಚಂದ್ರ

10:36 AM, Friday, December 30th, 2016
Share
1 Star2 Stars3 Stars4 Stars5 Stars
(No Ratings Yet)
Loading...

Loboಮಂಗಳೂರು: ಅವೈಜ್ಞಾನಿಕವಾಗಿರುವ ಎತ್ತಿನಹೊಳೆಯಂತಹ ಅಸಂಬದ್ಧ ಯೋಜನೆಗಳನ್ನು ಕೈಬಿಡಿ. ಇಂತಹ ಅಸಂಬದ್ಧ ಯೋಜನೆಗೆ ಸಮರ್ಪಕ ಉತ್ತರ ಸಿಗುವವರೆಗೂ ಪ್ರಶ್ನಿಸುತ್ತಲೇ ಇರುತ್ತೇನೆ. ಉತ್ತರ ನೀಡದಿದ್ದರೆ ಬೀದಿಗಿಳಿದು ಹೋರಾಡಲೂ ಸಿದ್ಧ ಎಂದು ಪರಿಸರ ವಿಜ್ಞಾನಿ, ಅಂತಾರಾಷ್ಟ್ರೀಯ ದ್ವೈವಾರ್ಷಿಕ ಲೇಕ್- ಸಮ್ಮೇಳನ ಅಧ್ಯಕ್ಷ ಡಾ. ಟಿ.ವಿ.ರಾಮಚಂದ್ರ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.

ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ದ್ವೈವಾರ್ಷಿಕ ಲೇಕ್- ಸಮ್ಮೇಳನ- 2016 ರ ಯುವ ಲೇಕ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಾರ್ವಜನಿಕರೆಲ್ಲರಿಗೂ ಪ್ರಶ್ನಿಸುವ ಅಧಿಕಾರ ಇದೆ. ಸಾರ್ವಜನಿಕರ ಹಣವನ್ನು ಸಂಬಳವಾಗಿ ಪಡೆಯುತ್ತಿರುವ ನಾನು ಎತ್ತಿನಹೊಳೆಯಂತಹ ‘ನಾನ್‍ಸೆನ್ಸ್’ ಯೋಜನೆಯ ಸಮರ್ಪಕ ಮಾಹಿತಿಗಾಗಿ ಪ್ರಶ್ನಿಸುತ್ತೇನೆ ಎಂದು ಖಂಡಿಸಿದರು.

ಸರ್ಕಾರಿ ಯೋಜನೆಗಳು ಕಾಂಟ್ರಾಕ್ಟರ್ ಹಾಗೂ ಯೋಜನೆ ರೂಪಿಸುವವರ ಪರ ಯೋಜನೆಗಳು ಎಂದ ಡಾ. ಟಿ.ವಿ.ರಾಮಚಂದ್ರ, ಎತ್ತಿನಹೊಳೆ ನದಿ ತಿರುಗಿಸುವ ಯೋಜನೆ ಅಸಂಬದ್ಧ ಹಾಗೂ ಅಸಮರ್ಪಕ ಯೋಜನೆ. ಆದರೆ ಅಲ್ಲಿ ಇರುವುದು 9.5 ಟಿಎಂಸಿ ಮಾತ್ರ. ಸರ್ಕಾರಿ ಅಂಕಿ-ಅಂಶದ ಪ್ರಕಾರ ಎತ್ತಿನಹೊಳೆಯಲ್ಲಿ 24 ಟಿಎಂಸಿ ನೀರಿದೆ. ಅದು ಯಾವ ವೈಜ್ಞಾನಿಕ ಅಧ್ಯಯನದ ವರದಿಯ ಆಧಾರ ಎಂಬುದು ತಿಳಿದಿಲ್ಲ.

Loboಎತ್ತಿನಹೊಳೆಯಲ್ಲಿರುವ 9 ಟಿಎಂಸಿ ನೀರಿನಲ್ಲಿ 6 ಟಿಎಂಸಿ ನೀರು ಕೃಷಿ ಕಾರ್ಯಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಬಳಕೆಯಾದರೆ 2 ಟಿಎಂಸಿ ನೀರು ಅವಶ್ಯ ಪ್ರೋಟೀನ್ ನೀಡುವ ಜಲಚರಗಳಿಗಾಗಿ ಬಳಕೆಯಾಗುತ್ತಿದೆ. ಇದರಲ್ಲಿ ಉಳಿಯುವುದು 0.85 ಟಿಎಂಸಿ ಮಾತ್ರ. ಹಾಗಿದ್ದರೆ ಎಲ್ಲಿದೆ 24 ಟಿಎಂಸಿ ನೀರು ಎಂದು ಪ್ರಶ್ನಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English