ಮಂಗಳೂರು: ಸಚಿವ ಯು.ಟಿ.ಖಾದರ್ ಕೇರಳ ರಾಜ್ಯದ ತಳಂಗೆರೆಯಲ್ಲಿ ನಡೆದ ಫ್ರೆಂಡ್ಲಿ ಕ್ರಿಕೆಟ್ ಮ್ಯಾಚ್ ಆಡಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ಅಪರೂಪದ ಪ್ರಸಂಗ ನಡೆಯಿತು.
ಕೇರಳದ ಕಾಸರಗೋಡು ಜಿಲ್ಲೆಗೆ ಖಾಸಗಿ ಭೇಟಿ ನೀಡಿದ್ದ ಸಚಿವ ಯು.ಟಿ.ಖಾದರ್ ತಮ್ಮ ಆಪ್ತರೊಬ್ಬರು ನಡೆಸುತ್ತಿದ್ದ ತಳಂಗೆರೆ ಕ್ರಿಕೆಟ್ ಪಂದ್ಯಾಟ ನೋಡಲು ತೆರಳಿದ್ದರು.
ಈ ಸಂದರ್ಭದಲ್ಲಿ ಕ್ರಿಕೆಟ್ ಆಡುವಂತೆ ಒತ್ತಾಯಪಡಿಸಿದ ಕ್ರಿಕೆಟ್ ಅಭಿಮಾನಿಗಳ ಒತ್ತಡಕ್ಕೆ ಮಣಿದ ಸಚಿವ ಖಾದರ್ ನೀಲಿ ಜೆರ್ಸಿ ಧರಿಸಿ ಕ್ರಿಕೆಟ್ ಆಟವಾಡಿದರು.
ಎರಡು ಓವರ್‌ಗಳ ಕ್ರಿಕೆಟ್ ಪಂದ್ಯದಲ್ಲಿ ಖಾದರ್ ಒಂದು ಸಿಕ್ಸ್ ಬಾರಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಒಟ್ಟು 13 ರನ್ ಪಡೆದ ಸಚಿವ ಖಾದರ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆಯುವಲ್ಲಿಯೂ ಸಫಲರಾದರು.
Click this button or press Ctrl+G to toggle between Kannada and English