ಮಂಗಳೂರು : ಶಾರ್ಟ್ ಸರ್ಕ್ಯೂಟ್‌ನ ಪರಿಣಾಮ ಸಂಭವಿಸಿದ ಅಗ್ನಿ ಅವಘಡದಲ್ಲಿ ಟೈಲರಿಂಗ್ ಅಂಗಡಿಯಲ್ಲಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಬಟ್ಟೆಗಳು ಬೆಂಕಿಗಾವುತಿಯಾಗಿರುವ ಘಟನೆ ಮೂಡುಬಿದಿರೆಯ ಇರುವೈಲುವಿನಲ್ಲಿ ನಡೆದಿದೆ.
ರವಿ ಎಲ್ ಸುವರ್ಣ ಎಂಬುವರಿಗೆ ಸೇರಿದೆ ಎನ್ನಲಾದ ನಿರ್ಮಲು ಟೈಲರಿಂಗ್ ಅಂಗಡಿಯಲ್ಲಿಯೇ ಈ ಘಟನೆ ನಡೆದಿದೆ.
ಹೊಸ ಬಟ್ಟೆಗಳು ಸೇರಿದಂತೆ 5 ಹೊಲಗೆ ಯಂತ್ರಗಳು ಬೆಂಕಿಯಲ್ಲಿ ಸುಟ್ಟಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು.
Click this button or press Ctrl+G to toggle between Kannada and English