ಮಂಗಳೂರು, : ಕೊಣಾಜೆಯಲ್ಲಿ ‘ದ.ಕ ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ಧ’ ಎಂಬ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಜವಾಬ್ದಾರಿಯುತ ಲೋಕಸಭಾ ಸದಸ್ಯ ಸಾಮರಸ್ಯ ಕಾಪಾಡಬೇಕು. ಚುನಾಯಿತ ಪ್ರತಿನಿಧಿಯಾಗಿ ಈ ರೀತಿಯ ಹೇಳಿಕೆ ಸಲ್ಲದು. ಈ ಬಗ್ಗೆ ಗೃಹ ಸಚಿವರಲ್ಲಿ ಸಂಪರ್ಕದಲ್ಲಿದ್ದು, ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಅವರು ಬೆಂಕಿ ಹಚ್ಚುವಾಗ ಅದನ್ನು ಶಮನ ಮಾಡುವ ಶಕ್ತಿ ಸರಕಾರಕ್ಕಿದೆ ಎಂದು ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನೆ ಕಾನೂನು ವ್ಯವಸ್ಥೆ ಗೆ ಗಂಭೀರ ಸವಾಲಾಗಿದೆ. ಕಾರ್ತಿಕ್ ರಾಜ್ ಕೊಲೆ ಪ್ರಕರಣ ಸಿಒಡಿ ತನಿಖೆಗೆ ವಹಿಸಲು ಸಿಎಂ ಜೊತೆ ಮಾತನಾಡುತ್ತೇನೆ. ದುಷ್ಟ ಶಕ್ತಿಗಳ ಈ ಕೃತ್ಯವನ್ನು ಖಂಡಿಸುವುದಾಗಿ ಅವರು ಹೇಳಿದರು.
ನೋಟು ರದ್ದತಿ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ನೀಡಿದ 50 ದಿನಗಳು ಕಳೆದರೂ ಪರಿಸ್ಥಿತಿ ಸುಧಾರಿಸಿಲ್ಲ. ಕಪ್ಪು ಹಣ ಬಿಳಿ ಮಾಡಲು ಕಾಳಧನಿಕರಿಗೆ ಮೋದಿ ಅವಕಾಶ ನೀಡಿದ್ದಾರೆ. ವಿದೇಶಿ ಕಪ್ಪು ಹಣ ತರುವ ಬದಲು ದೇಶದ ಕೋಟ್ಯಂತರ ಜನರಿಗೆ ತಂದೊಡಿದ್ದಾರೆ ಎಂದು ಹೇಳಿದರು.
Click this button or press Ctrl+G to toggle between Kannada and English