ಮಂಗಳೂರು: ರಾಜ್ಯಕ್ಕೆ ವ್ಯವಸ್ಥಿತವಾಗಿ ಬೆಂಕಿ ಹಚ್ಚುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಣಾಜೆಯ ಕಾರ್ತಿಕ್ ಹತ್ಯೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಭಾವೋದ್ವೇಗದಲ್ಲಿ ಆಡಿದ ಕೆಲವೊಂದು ಶಬ್ದಗಳನ್ನು ಹಿಡಿದುಕೊಂಡು ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆಯುತ್ತಿರುವುದು ನೋಡಿದಾಗ `ದೆವ್ವದ ಬಾಯಿಯಲ್ಲಿ ಭಗವದ್ಗೀತೆ’ ಕೇಳಿದಂತ ಮಾತು ನೆನಪಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಗೋಹತ್ಯೆಗೆ ಮುಕ್ತ ಅವಕಾಶ, ಕಾನೂನಿನ ಹೆಸರಿನಲ್ಲಿ ಹಿಂದುಗಳ ಮೂಲ ನಂಬಿಕೆಗಳಿಗೆ ಕೊಡಲಿ ಏಟು ಹಾಕುವ ಯತ್ನ ನಡೆದಿದೆ ಎಂದು ಆರೋಪಿಸಿದರು. ಹಿಂದು ವಿರೋಧಿ ಟಿಪ್ಪು ಜಯಂತಿ ಆಚರಣೆ, ರಾಜ್ಯದೆಲ್ಲೆಡೆ ಹಿಂದು ಸಂಘಟನೆಗಳ, ಬಿಜೆಪಿ ಕಾರ್ಯಕರ್ತರ ಹತ್ಯೆಗಳ ಮೂಲಕ ರಾಜ್ಯದಲ್ಲಿ ಮತೀಯ ಗಲಭೆಗಳನ್ನು ಹುಟ್ಟು ಹಾಕುವ ಪ್ರಯತ್ನದ ಮೂಲಕ ರಾಜ್ಯದಲ್ಲಿ ಗಲಭೆಗಳು ಏರ್ಪಡಲು ಕಾರಣರಾಗಿದ್ದಾರೆ ಸತ್ಯಜಿತ್ ಸುರತ್ಕಲ್ ದೂರಿದರು.
ಸಚಿವರಾದ ರಮಾನಾಥ ರೈ ಮತ್ತು ಯು. ಟಿ. ಖಾದರ್‌ರವರ ಏಜೆಂಟರು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ. ಮಾದಕ ದ್ರವ್ಯ ಜಾಲ ಮಿತಿ ಮೀರಿದೆ. ತಲವಾರು ಝಳಪಿಸಿ ಮನೆಯ ಕೊಟ್ಟಿಗೆಯಿಂದಲೇ ಹಸುಗಳ ಕಳ್ಳಸಾಗಣೆ ನಡೆಯುತ್ತಿದೆ. ಇದನ್ನೆಲ್ಲಾ ವಿರೋಧಿಸಿದ ಪ್ರಶಾಂತ್ ಪೂಜಾರಿ, ಮೂಡುಶೆಡ್ಡೆ ಚರಣ್ ಅಂತಹವರ ಹತ್ಯೆಗಳು ನಡೆದಿವೆ ಎಂದು ಆರೋಪಿಸಿದರು.
Click this button or press Ctrl+G to toggle between Kannada and English