ಮಂಗಳೂರು: ವಿದೇಶಿ ಕರೆನ್ಸಿಗಳನ್ನು ಸಾಗಿಸುತ್ತಿದ್ದ ಓರ್ವನನ್ನ ಡಿಆರ್‌ಐ (ಡೈರಕ್ಟರೇಟ್ ರೆವೆನ್ಯೂ ಇಂಟೆಲಿಜೆನ್ಸ್) ಅಧಿಕಾರಿಗಳು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನ ಭಟ್ಕಳದ ಮೊಹಮ್ಮದ್ ಫಾರೂಕ್ ಅರ್ಮರ್ (51) ಎಂದು ಗುರುತಿಸಲಾಗಿದೆ. ಈ ವೇಳೆ ಆತನಲ್ಲಿದ್ದ 25,07,162ರೂ. ಮೌಲ್ಯದ ವಿದೇಶಿ ಕರೆನ್ಸಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಯುಎಸ್ ಡಾಲರ್, ಬ್ರಿಟಿಷ್ ಪೌಂಡ್, ಯೂರೋ, ಯುಎಇ ದಿರಾಮ್, ಸೌದಿ ರಿಯಾಲ್ ಹಾಗೂ ಖತಾರ್ ರಿಯಾಲ್‌ಗಳನ್ನು ಸಿಹಿ ತಿಂಡಿಗಳ ಪೊಟ್ಟಣದಲ್ಲಿ ಜೋಡಿಸಿಟ್ಟಿದ್ದ ಕಟ್ಟನ್ನು ತಪಾಸಣೆಗೊಳಪಡಿಸಿದಾಗ ಫಾರೂಕ್ ಸಿಕ್ಕಿಬಿದ್ದಿದ್ದಾನೆ.
ವಿಚಾರಣೆ ವೇಳೆ ಫಾರೂಕ್ ತಾನು ಈ ಹಿಂದೆಯೂ ವಿದೇಶಿ ಕರೆನ್ಸಿ, ಮೊಬೈಲ್ ಹಾಗೂ ಸಿಹಿ ತಿಂಡಿಗಳನ್ನು ಕಾನೂನು ಬಾಹಿರವಾಗಿ ಗಲ್ಫ್ ದೇಶಗಳಿಂದ ತಂದಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ. ಇದು ಹವಾಲ ದುಡ್ಡಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.
Click this button or press Ctrl+G to toggle between Kannada and English