ಮಂಗಳೂರು: ವಾಹನಗಳ ಹೊಗೆ ಪರೀಕ್ಷಣಾ ಸಂಚಾರಿ ವಾಹನಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶುಕ್ರವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಗರದಲ್ಲಿ ಶೇ.60 ರಷ್ಟು ಮಾಲಿನ್ಯ ವಾಹನಗಳು ಹೊರಸೂಸುವ ಹೊಗೆಯಿಂದಾಗಿ ಆಗುತ್ತಿದೆ. ಹಳೆಯ ವಾಹನಗಳನ್ನು ಹೆಚ್ಚಾಗಿ ಬಳಸುವುದು ಕೂಡ ಒಂದು ಕಾರಣ. ಪ್ರತಿಯೊಬ್ಬರಲ್ಲಿ ಮಾಲಿನ್ಯದಿಂದಾಗುವ ಅಪಾಯದ ಅರಿವು ಉಂಟಾಗಬೇಕು.
ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯಕ್ರಮಗಳ ಜೊತೆಗೆ ಜನತೆಯೂ ಸಹಕಾರವೂ ಅಗತ್ಯವಿದೆ. ಹಾಗಾಗಿ ಈ ಬಾರಿ ಜಿಲ್ಲೆಯ ಅರಣ್ಯ ಭಾಗದ ಸುಮಾರು 2 ಸಾವಿರ ಜನರಿಗೆ ಅಡುಗೆ ಅನಿಲ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.
ಎಂಆರ್‌ಪಿಎಲ್‌ನ ಅಧಿಕಾರಿ ಶ್ಯಾಮ್ ಕಾಮತ್ ಮಾಲಿನ್ಯ ನಿಯಂತ್ರಣ ಕುರಿತಂತೆ ಉಪನ್ಯಾಸ ನೀಡಿದರು. ಸಾರಿಗೆ ಉಪ ಆಯುಕ್ತ ರಮೇಶ್ ಎಂ.ವರ್ಣಿಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್, ಶಾಸಕ ಮೊಹಿಯುದ್ದೀನ್ ಬಾವಾ, ಎಂಆರ್‌ಪಿಎಲ್ ನಿರ್ಧೇಶಕ ಹೆಚ್. ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ ಪಾಟೀಲ್, ಎನ್ಐಟಿಕೆ ಪ್ರೊ. ಡಾ.ಜಿ.ಶ್ರೀನಿಕೇತನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ. ಹನುಮಂತಪ್ಪ, ಪಾಲಿಕೆ ಆಯುಕ್ತ ಮಹಮ್ಮದ್ ನಜೀರ್, ಪರಿಸರಾಧಿಕಾರಿ ರಾಜಶೇಖರ್ ಪುರಾಣಿಕ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English