ಜಾಗೃತಿ ವಾಹನ ಕಾರ್ಯಾಚರಣೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ

3:41 PM, Saturday, January 7th, 2017
Share
1 Star2 Stars3 Stars4 Stars5 Stars
(No Ratings Yet)
Loading...

Ramanatha-raiಮಂಗಳೂರು: ಅಪರಾಧ ಪ್ರಕರಣಗಳನ್ನು ನಿಗ್ರಹಿಸಲು ಜನ ಜಾಗೃತಿ ಕೂಡಾ ಪರಿಣಾಮಕಾರಿ ಕ್ರಮ ಎಂದರಿತ ಮಂಗಳೂರು ಪೊಲೀಸ್ ಕಮಿಷನರೇಟ್, ಸಿಮೀತ ವ್ಯಾಪ್ತಿಯಲ್ಲಿ ಜಾಗೃತಿ ವಾಹನ ಕಾರ್ಯಾಚರಣೆಯನ್ನು ಆಯೋಜಿಸಿದೆ. ಜಾಗೃತಿ ವಾಹನಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು.

ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ ಮಾತನಾಡಿ, ಅಪರಾಧಗಳನ್ನು ತಡೆಯುವಲ್ಲಿ ಜನತೆಯ ಪಾತ್ರವೂ ಮಹತ್ತರವಾಗಿದೆ. ಯಾರೋ ಫೋನ್ ಮಾಡಿ ಬ್ಯಾಂಕ್ ಖಾತೆಯ ವಿವರ ಕೇಳಿದಾಕ್ಷಣ ಕೊಟ್ಟು ಬಿಡುವುದಲ್ಲ. ನೇರ ಬ್ಯಾಂಕ್‌ಗೆ ಹೋಗಿ ಪರಿಶೀಲಿಸಬೇಕು.

ನಕಲಿ ಕರೆಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡಬೇಕು. ಒಂದು ತಿಂಗಳ ಕಾಲ ಸುತ್ತಾಡಲಿರುವ ಈ ವಾಹನ ಜನತೆಯಲ್ಲಿ ಜಾಗೃತಿ ಮೂಡಿಸುವ ವಿಶ್ವಾಸವಿದೆ ಎಂದರು.

ಕಾರ್ಪೋರೇಶನ್‌ ಬ್ಯಾಂಕಿನ ಡಿಜಿಎಂ ವಿಠಲ ಶೆಣೈ, ಅಧಿಕಾರಿ ಕೆ.ಎಸ್. ನೇಗಿ, ಡಿಸಿಪಿಗಳಾದ ಕೆ.ಎಂ. ಶಾಂತರಾಜು, ಡಾ.ಸಂಜೀವ ಪಾಟೀಲ ಉಪಸ್ಥಿತರಿದ್ದರು.

ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಂದು ತಿಂಗಳ ಕಾಲ ಸಂಚರಿಸುವ ಈ ವಾಹನ ಆಯ್ದ ಸ್ಥಳಗಳಲ್ಲಿ ನಿಂತು ಜನತೆಯಲ್ಲಿ ಜಾಗೃತಿ ಮೂಡಿಸಲಿದೆ. ಈ ವಾಹನದಲ್ಲಿ ದೊಡ್ಡದಾದ ಪ್ರೊಜೆಕ್ಟರ್ ಅಳವಡಿಸಲಾಗಿದ್ದು, ಪೊಲೀಸ್ ಆಯುಕ್ತರು, ಡಿಸಿಪಿ ಸೇರಿದಂತೆ ಪ್ರಮುಖ ಸಂದೇಶಗಳು ಬಿತ್ತರವಾಗಲಿದೆ. ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ (ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ವಿರಾಮ) ಈ ವಾಹನ ಕರ್ತವ್ಯ ನಿರ್ವಹಿಸಲಿದೆ.

ಮಹಿಳೆಯರ ಸರ ಸೆಳೆದು ಪರಾರಿಯಾಗುವುದು, ಎಟಿಎಂ ನಂಬರ್ ಕೇಳಿ ವಂಚಿಸುವುದು, ಕಿಸೆಗಳ್ಳತನ, ಗಮನ ಬೇರೆಡೆ ಸೆಳೆದೆ ಬೆಳೆ ಬಾಳುವ ವಸ್ತುಗಳನ್ನು ದೋಚುವುದು ಸೇರಿದಂತೆ ನಗರದಲ್ಲಿ ನಡೆಯುತ್ತಿರುವ ಪ್ರಮುಖ ಅಪರಾಧಗಳತ್ತ ಬೆಳಕು ಚೆಲ್ಲುವಲ್ಲಿ ಜನಜಾಗೃತರಾಗಿರುವಂತೆ ಎಚ್ಚರಿಕೆಯ ಸಂದೇಶವನ್ನು ಈ ವಾಹನ ತನ್ನ ಪ್ರೊಜೆಕ್ಟರ್ ಮೂಲಕ ನೀಡಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English